ನಟ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಕೇಸ್‌ನಲ್ಲಿ ನಟಿ ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್‌ ನೀಡಿದ ಸಿಬಿಐ

Sampriya
ಭಾನುವಾರ, 23 ಮಾರ್ಚ್ 2025 (13:39 IST)
Photo Courtesy X
ಮುಂಬೈ: 2020ರಲ್ಲಿ ನಡೆದ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಿರುವ ಸಿಬಿಐ ಅಧಿಕಾರಿಗಳು ನಾಲ್ಕೂವರೆ ವರ್ಷಗಳ ಬಳಿಕ ಅಂತಿಮ ವರದಿವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

2020ರ ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ 34 ವರ್ಷದ ಸುಶಾಂತ್ ಸಿಂಗ್ ರಜಪೂತ್ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು.

ಸುಶಾಂತ್‌ ಆಪ್ತೆಯಾಗಿದ್ದ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದ ಪ್ರಚೋದನೆಯಿಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತನ ತಂದೆ ಆರೋಪಿಸಿ ದೂರು ನೀಡಿದ್ದರು. ರಿಯಾ ಚಕ್ರವರ್ತಿ ಪ್ರತಿದೂರು ದಾಖಲಿಸಿದ್ದರು.

ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ತನಿಖೆ ನಡೆಸಿದ ಸಿಬಿಐ ತಂಡವು ಸುಶಾಂತ್ ರಜಪೂತ್ ಆತ್ಮಹತ್ಯೆಗೆ ಯಾರೂ ಪ್ರಚೋದನೆ ನೀಡಿಲ್ಲ. ಪ್ರಚೋದಿಸಿರುದಕ್ಕೆ ಯಾವುದೇ ಪುರಾವೆಗಳು ಸಂಸ್ಥೆಗೆ ಸಿಗಲಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಈ ಮೂಲಕ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಇಬ್ಬರಿಂದ ಕೊಲೆ ನಡೆದಿದೆ: ಸಹೋದರಿ ಶ್ವೇತಾ ಸಿಂಗ್‌

ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

ದರ್ಶನ್ ಆಂಡ್ ಗ್ಯಾಂಗ್ ಗೆ ತಾತ್ಕಾಲಿಕ ರಿಲೀಫ್: ದೋಷಾರೋಪಪಟ್ಟಿ ಮುಂದೂಡಿಕೆ

ಮಗ ವಿನೀಶ್ ಹುಟ್ಟುಹಬ್ಬದಂದೇ ದರ್ಶನ್ ಗೆ ಅಗ್ನಿಪರೀಕ್ಷೆ: ದಾಸನಿಗೆ ಎದೆಯಲ್ಲಿ ಢವ ಢವ

ಮುಂದಿನ ಸುದ್ದಿ
Show comments