Webdunia - Bharat's app for daily news and videos

Install App

ನಟ ರಕ್ಷಿತ್ ಶೆಟ್ಟಿ ಮೇಲೆ ಬಿತ್ತು ಕೇಸ್: ಏನಿದು ಪ್ರಕರಣ

Krishnaveni K
ಸೋಮವಾರ, 15 ಜುಲೈ 2024 (13:33 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಯಾರ ಗೋಜಿಗೂ ಹೋಗದೇ ತಮ್ಮದೇ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೇಲೆ ಈಗ ಪ್ರಕರಣವೊಂದು ದಾಖಲಾಗಿದೆ. ಅಷ್ಟಕ್ಕೂ ಇದು ಯಾವ ಕೇಸ್ ಇಲ್ಲಿದೆ ವಿವರ.

ತಮ್ಮ ಸಿನಿಮಾದಲ್ಲಿ ಎರಡು ಸಿನಿಮಾ ಹಾಡುಗಳನ್ನು ಅನುಮತಿಯಿಲ್ಲದೇ ಬಳಸಿಕೊಂಡಿದ್ದಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೇಲೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ನಟ ರಕ್ಷಿತ್ ಶೆಟ್ಟಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ದೂರವಾಣಿ ಮುಖಾಂತರ ಮಾಹಿತಿ ನೀಡಿದ್ದಾರೆ.

ರಕ್ಷಿತ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿದ್ದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಎರಡು ಹಳೆಯ ಹಾಡುಗಳನ್ನು ಬಳಕೆ ಮಾಡಲಾಗಿದೆ. ‘ನ್ಯಾಯ ಎಲ್ಲಿದೆ..’, ‘ಗಾಳಿಮಾತು’ ಹಾಡುಗಳನ್ನು ಅನುಮತಿಯಿಲ್ಲದೇ ಬಳಕೆ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿದೆ. ಈ ಸಂಬಂಧ ಎಂಆರ್ ಟಿ ಮ್ಯೂಸಿಕ್ ನ ಸಹ ಪಾಲುದಾರರಾದ ನವೀನ್ ಕುಮಾರ್ ಎಂಬವರು ರಕ್ಷಿತ್ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಹಾಡುಗಳನ್ನು ಬಳಕೆ ಮಾಡುವ ಬಗ್ಗೆ 2024 ರ ಜನವರಿಯಲ್ಲಿ ರಕ್ಷಿತ್ ಜೊತೆ ಮಾತುಕತೆ ನಡೆದಿತ್ತು. ಆದರೆ ಮಾತುಕತೆ ಸರಿ ಬರಲಿಲ್ಲ. ಆದರೆ ಆ ಬಳಿಕ ಹಾಡನ್ನು ಸಿನಿಮಾದಲ್ಲಿಬಳಕೆ ಮಾಡಲಾಗಿತ್ತು. ಹೀಗಾಗಿ ಈಗ ರಕ್ಷಿತ್ ವಿರುದ್ಧ ಹಕ್ಕು ಸ್ವಾಮ್ಯ ಪ್ರಸಾರದ ಹಕ್ಕನ್ನು ಅನುಮತಿಯಿಲ್ಲದೇ ಬಳಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments