ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್​ಗೆ 60ರ ಸಂಭ್ರಮ: ಮನೆಮುಂದೆ ಅಭಿಮಾನಿಗಳ ಜಾತ್ರೆ

Sampriya
ಭಾನುವಾರ, 2 ನವೆಂಬರ್ 2025 (10:55 IST)
Photo Credit X
ಮುಂಬೈ: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರಿಗೆ ಇಂದು 60 ವರ್ಷದ ಸಂಭ್ರಮ. ಸೂಪರ್‌ ಸ್ಟಾರ್‌ ನಟ ಮನೆಯ ಮುಂದೆ ಅಭಿಮಾನಿಗಳ ದಂಡೇ ಸೇರಿದೆ.

ಸೂಪರ್‌ ಸ್ಟಾರ್‌ ಶಾರುಖ್ ಖಾನ್ ಅವರನ್ನು ನೋಡುವ ಆಸೆಯಿಂದ ವಿದೇಶದಿಂದಲೂ ಫ್ಯಾನ್ಸ್ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಶಾರುಖ್ ಖಾನ್ ಅವರಿಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಬಂಗಲೆಯ ಬಳಿಯ ಬ್ಯಾರಿಕೇಡ್‌ಗಳ ಉದ್ದಕ್ಕೂ ಜನಸಮೂಹ ಸೇರಿದ್ದು, ಶಾರುಕ್‌, ಶಾರುಕ್ ಎಂದು ಘೋಷಣೆ ಮೊಳಗುತ್ತಿದೆ.

ಶಾರುಖ್‌ ಮನೆಯ ಮನ್ನತ್‌ ಆವರಣದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಜನರು ತಮ್ಮ ನೆಚ್ಚಿನ ನಟನಿಗಾಗಿ ಗುಂಪುಗಳಾಗಿ ಕಾಯುತ್ತಿರುವುದನ್ನು ನೋಡಬಹುದು. ಮನ್ನತ್‌ನಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಂತೆ, ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರತಿ ವರ್ಷವು ಶಾರುಖ್ ಖಾನ್ ಅವರ ಹುಟ್ಟುಹಬ್ಬವು ಅವರ ಅಭಿಮಾನಿಗಳಿಗೆ ಒಂದು ಪ್ರಮುಖ ಕಾರ್ಯಕ್ರಮವಾಗುತ್ತದೆ. ಮನ್ನತ್‌ನ ಬಾಲ್ಕನಿಯಿಂದ ಅಭಿಮಾನಿಗಳಿಗೆ ಶಾರೂಕ್‌ ದರ್ಶನ್‌ ನೀಡುತ್ತಾರೆ.

ಕಳೆದ ಎರಡು ವರ್ಷಗಳಿಂದ ಶಾರುಕ್‌ ಯಾವುದೇ ಸಿನಿಮಾಗಳು ಬಿಡುಗಡೆ ಆಗಿಲ್ಲ. 2023ರಲ್ಲಿ ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳು ಬಿಡುಗಡೆ ಆಗಿದ್ದವು. ಈಗ ಅವರು ‘ಕಿಂಗ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ಮುಂದಿನ ಸುದ್ದಿ
Show comments