Select Your Language

Notifications

webdunia
webdunia
webdunia
webdunia

ಡ್ರಗ್ಸ್ ಕೇಸ್ ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಮಲೈಕಾ, ಮೀರಾ?

ಕರಣ್ ಜೋಹರ್
ಮುಂಬೈ , ಶುಕ್ರವಾರ, 18 ಸೆಪ್ಟಂಬರ್ 2020 (22:48 IST)
ಬಾಲಿವುಡ್ ನ ಘಟಾನುಘಟಿ ನಟರು ಹಾಗೂ ನಟಿಯರಿಗೆ ಇದೀಗ ಡ್ರಗ್ಸ್ ಕೇಸ್ ಸುತ್ತಿಕೊಳ್ಳುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎನ್ನಲಾಗಿದೆ.

ನಿರ್ಮಾಪಕ ಕರಣ್ ಜೋಹರ್ 2019 ರಲ್ಲಿ ಸ್ಟಾರ್-ಸ್ಟಡ್ಡ್ ಪಾರ್ಟಿ ಆಯೋಜಿಸಿದ್ದ ವಿಡಿಯೋವನ್ನು ಇದೀಗ ಎನ್‌ಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿಯಲ್ಲಿ ವಿಕ್ಕಿ ಕೌಶಲ್, ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್, ರಣಬೀರ್ ಕಪೂರ್, ಮಲೈಕಾ ಅರೋರಾ, ಅರ್ಜುನ್ ಕಪೂರ್, ವರುಣ್ ಧವನ್, ಜೋಯಾ ಅಖ್ತರ್, ಅಯಾನ್ ಮುಖರ್ಜಿ, ಮೀರಾ ರಜಪೂತ್, ಶಕುನ್ ಬಾತ್ರಾ ಮೊದಲಾದವರಿದ್ದರು.

ಪಾರ್ಟಿಯಲ್ಲಿ ಬಂದವರಲ್ಲಿ ಡ್ರಗ್ಸ್ ತೆಗೆದುಕೊಂಡಿರುವ ಕುರಿತು ತನಿಖೆ ನಡೆಸಬೇಕೆಂದು ಅಕಾಲಿ ದಳದ ವಕ್ತಾರ ಮಂಜಿಂದರ್ ಸಿಂಗ್ ಸಿರ್ಸಾ ಅವರು ಕೇಸ್ ದಾಖಲು ಮಾಡಿದ್ದಾರೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಕೊಲೆ ಹಿಂದೆ ಡ್ರಗ್ಸ್ ಮಾಫಿಯಾ ಕೈವಾಡ?