Publish Date: Fri, 27 Jan 2017 (10:03 IST)
Updated Date: Fri, 27 Jan 2017 (10:08 IST)
ವಾಣಿಜ್ಯೋದ್ಯಮಿ, ನಿರ್ಮಾಪಕ ವರುಣ್ ಮಣಿಯನ್ರನ್ನು ಮದುವೆಯಾಗುತ್ತಿರುವುದಾಗಿ ಈ ಹಿಂದೊಮ್ಮೆ ತ್ರಿಷಾ ಪ್ರಕಟಿಸಿದ್ದರು. ಇವರಿಬ್ಬರಿಗೂ ಅದ್ದೂರಿಯಾಗಿ ನಿಶ್ಚಿತಾರ್ಥವು ನಡೆದಿತ್ತು. ಆದರೆ ಸಿನಿಮಾಗಳಲ್ಲಿ ಅಭಿನಯಿಸಬೇಡವೆಂದು ವರುಣ್ ಹೇಳಿದ್ದ ಕಾರಣ ತ್ರಿಷಾ ಆತನೊಂದಿಗೆ ಸಂಬಂಧ ಮುರಿದುಕೊಂಡಿದ್ದರು.
ಅಲ್ಲಿಗೆ ಅವರಿಬ್ಬರ ಮದುವೆ ಕನಸು ಮುರಿದುಬಿದ್ದಿತ್ತು. ಆದರೆ ಇತ್ತೀಚೆಗೆ ವರುಣ್ ಜತೆ ಮತ್ತೊಬ್ಬ ನಟಿ ಬಿಂದು ಮಾಧವಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಹತ್ತಿರವಾಗಿದ್ದಾರೆ ಎಂಬ ಸುದ್ದಿ ಇದೆ. ಇಬ್ಬರೂ ಜತೆಯಾಗಿರುವ ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ.
ಸದ್ಯಕ್ಕೆ ಇಬ್ಬರು ಪ್ರೇಮಿಸಿಕೊಳ್ಳುತ್ತಿದ್ದಾರೆಂದು, ಶೀಘ್ರದಲ್ಲೇ ಮದುವೆ ಸಹ ಮಾಡಿಕೊಳ್ಳಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಇತ್ತೀಚೆಗೆ ಬಿಂದು ಮಾಧವಿ ಯಾವುದೇ ಚಿತ್ರಗಳನ್ನೂ ಒಪ್ಪಿಕೊಳ್ಳದಿರುವುದು ಇನ್ನಷ್ಟು ಪುಷ್ಟಿ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.