Publish Date: Fri, 27 Jan 2017 (09:58 IST)
Updated Date: Fri, 27 Jan 2017 (10:02 IST)
ಬಾಲಿವುಡ್ ಸ್ಟಾರ್ಸ್ ಶಾರುಖ್ ಖಾನ್ ಅಭಿನಯದ ರಯೀಸ್ ಮತ್ತು ಹೃತಿಕ್ ರೋಷನ್ ನಟನೆಯ ಕಾಬಿಲ್ ಚಿತ್ರಗಳು ಬುಧವಾರ (ಜ.25) ಪ್ರೇಕ್ಷಕರ ಮುಂದೆ ಬಂದಿವೆ. ಈ ಎರಡೂ ಚಿತ್ರಗಳು ಮೊದಲ ದಿನ ಎಷ್ಟು ವಸೂಲಿ ಮಾಡಿವೆ ಎಂಬುದನ್ನು ಚಿತ್ರ ವಿಮರ್ಶಕ ತರಣ್ ಆದರ್ಶ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ರಯೀಸ್ ಚಿತ್ರ ಮೊದಲ ದಿನ ರೂ.20.42 ಕೋಟಿ ಗಳಿಸಿದೆ. ಗುರುವಾರ ಗಣರಾಜ್ಯೋತ್ಸವ ನಿಮಿತ್ತ ಗಳಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನು ಹೃತಿಕ್ ರೋಷನ್ ಹಾಗೂ ಯಾಮಿ ಗೌತಮ್ ಅಭಿನಯದ ಕಾಬಿಲ್ ಚಿತ್ರ ಮೊದಲ ದಿನ ರೂ.10.43 ಕೋಟಿ ಕಲೆಕ್ಷನ್ ಮಾಡಿದೆ.
ಒಟ್ಟಾರೆ ಎರಡು ಚಿತ್ರಗಳ ಕಲೆಕ್ಷನ್ ಗಣರಾಜ್ಯೋತ್ಸವ ದಿನದ ಹಾಗೂ ವಾರಾಂತ್ಯದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಬಾಕ್ಸ್ ಆಫೀಸಲ್ಲಿ ಅತಿ ಹೆಚ್ಚು ಗಳಿಸಿದ್ದು, ಈ ಎರಡೂ ಚಿತ್ರಗಳು ನೂರು ಕೋಟಿ ಕ್ಲಬ್ ಸೇರುತ್ತವೆಯೇ ಎಂಬುದು ಕಾದುನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.