ಬಿಗ್‌ಬಾಸ್ ವಿನ್ನರ್, ನಟ ಪ್ರಥಮ್‌ಗೆ ಹಲ್ಲೆ ಪ್ರಕರಣ: ರೌಡಿಶೀಟರ್‌ ಅರೆಸ್ಟ್‌

Sampriya
ಬುಧವಾರ, 10 ಸೆಪ್ಟಂಬರ್ 2025 (19:28 IST)
Photo Credit X
ಬೆಂಗಳೂರು: ಬಿಗ್‌ಬಾಸ್ ವಿನ್ನರ್, ನಟ ಪ್ರಥಮ್‌ಗೆ ಡ್ರ್ಯಾಗರ್‌ ತೋರಿಸಿ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ್ದ ಪ್ರಕರಣ ಸಂಬಂಧ  ರೌಡಿಶೀಟರ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಪ್ರಥಮ್‌ಗೆ ಬೆದರಿಕೆ ಹಾಕಿದ್ದ ರೌಡಿಶೀಟರ್ ಬೇಕರಿ ರಘು ಎಂಬಾತನನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲಿಸರು ಅರೆಸ್ಟ್‌ ಮಾಡಿದ್ದಾರೆ. 

ಕಳೆದ ತಿಂಗಳು ದೊಡ್ಡಬಳ್ಳಾಪುರ ಸಿವಿಲ್ ಕೋರ್ಟ್‌ಗೆ ಹಾಜರಾಗಿ ಬೇಕರಿ ರಘು ಜಾಮೀನು ಪಡೆದಿದ್ದರಿಂದ ಬಂಧನಕ್ಕೂ ಮುನ್ನವೇ ಜಾಮೀನು ಪಡೆದುಕೊಂಡಿದ್ದರು. ಇದೀಗ ಪ್ರಕರಣ ಸಂಬಂಧ ರಘುನನ್ನು ಪೊಲೀಸರು ಬಂಧಿಸಿದ್ದಾರೆ.

ನ್ಯಾಯಾಲಯ ವಿಧಿಸಿದ ಷರತ್ತುಗಳ ಉಲ್ಲಂಘನೆ ಮಾಡಿದ ಕಾರಣ ನೀಡಿ ಬಂಧಿಸಲಾಗಿದೆ. 

ದೊಡ್ಡಬಳ್ಳಾಪುರ ಸಿವಿಲ್ ಕೋರ್ಟ್‌ನಿಂದ ಕಳೆದ ತಿಂಗಳು ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಪ್ರತಿ ಭಾನುವಾರ ಠಾಣೆಗೆ ಬಂದು ಸಹಿ ಹಾಕಲು ಸೂಚನೆ ನೀಡಲಾಗಿತ್ತು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments