Publish Date: Sun, 20 Sep 2020 (21:09 IST)
Updated Date: Sun, 20 Sep 2020 (21:12 IST)
ಬಿಗ್ ಬಾಸ್ ಸ್ಪರ್ಧಿಯೊಬ್ಬರು ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಟ್ವಿಟ್ಟರ್ ನಲ್ಲಿ ಸಮರ ಸಾರಿದ್ದಾರೆ.
ಬಿಗ್ ಬಾಸ್ ಸೀಸನ್ 11 ಸ್ಪರ್ಧಿ ಅರ್ಷಿ ಖಾನ್ ಅವರು ನಟಿ ಕಂಗನಾ ವಿರುದ್ಧ ಕಿಡಿಕಾರಿದ್ದಾರೆ.
ಕಂಗನಾ ರಣಾವತ್ ಅವರಲ್ಲದೆ, ಅರ್ಷಿ ಖಾನ್ ಅವರು ಅರ್ನಾಬ್ ಗೋಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಗ್ ಬಾಸ್ 11 ರೊಂದಿಗೆ ಖ್ಯಾತಿ ಗಳಿಸಿರುವ ನಟಿ ಮತ್ತು ರೂಪದರ್ಶಿ ಅರ್ಷಿ ಖಾನ್ ಅವರು, "ಕಂಗನಾ ರಣಾವತ್! ನಾನು ಮೊದಲು ನಿಮ್ಮನ್ನು ಬೆಂಬಲಿಸಿದ್ದೇನೆ ಆದರೆ ಇನ್ನು ಮುಂದೆ ಅಲ್ಲ ಎಂದಿದ್ದಾರೆ.
ನೀವು ಉತ್ತಮ ನಟಿಯರ ಅಭಿಪ್ರಾಯಗಳನ್ನು ಕೇಳುವುದಿಲ್ಲ. ನೀವು ನಿಮ್ಮ ನಿಲುವನ್ನು ಭಾರತವು ಒಪ್ಪಿಕೊಳ್ಳಬೇಕು ಎಂದು ಭಾವಿಸಿದಂತಿದೆ ಮತ್ತು ಇನ್ನೊಬ್ಬ ಕಲಾವಿದರ ಅಭಿಪ್ರಾಯವನ್ನು ಜೀರ್ಣಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತಿಲ್ಲ. ಎಲ್ಲರೂ ನಿಮ್ಮಂತೆ ಯೋಚಿಸಬೇಕು ಎಂದು ನೀವು ಬಯಸುತ್ತೀರಿ ಎಂದು ಟಾಂಗ್ ನೀಡಿದ್ದಾರೆ.