Webdunia - Bharat's app for daily news and videos

Install App

BigBoss Season 11: ಗೌತಮಿ ಪಾಸಿಟಿವ್‌ಗೆ ನಗುತ್ತಲೇ ಚಾಟಿ ಬೀಸಿದ ಶೋಭಾ ಶೆಟ್ಟಿ

Sampriya
ಮಂಗಳವಾರ, 19 ನವೆಂಬರ್ 2024 (17:34 IST)
Photo Courtesy X
ತೆಲುಗು ಬಿಗ್‌ಬಾಸ್‌ನಲ್ಲಿ ಕಿಚ್ಚು ಹತ್ತಿಸಿದ್ದ ಶೋಭಾ ಶೆಟ್ಟಿ ಇದೀಗ ಕನ್ನಡ ಬಿಗ್‌ಬಾಸ್‌ಗೆ ಮಾಸ್ ಆಗಿ ಎಂಟ್ರಿಕೊಟ್ಟಿದ್ದಾರೆ. ಬಂದ ಮೊದಲ ದಿನವೇ ಗೌತಮಿ ಮುಖವಾಡ ಕಳಚುವುದಾಗಿ ಓಪನ್ ಆಗಿ ಸವಾಲೆಸೆದ ಶೋಭಾಗೆ ಇಂದು ಗೌತಮಿ ಅವರು ಅನರ್ಹ ವ್ಯಕ್ತಿ ಎಂದು ಹೇಳಿದ್ದಾರೆ.

ಇಂದು ಕಲರ್ಸ್‌ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಬಿಗ್‌ಬಾಸ್‌ ಟಾಸ್ಕ್‌ವೊಂದನ್ನು ನೀಡಿದೆ. ಹೊಸದಾಗಿ ಎಂಟ್ರಿಕೊಟ್ಟ ವೈಲ್ಡ್‌ಕಾರ್ಡ್ ಸ್ಪರ್ಧಿಗಳಾದ ರಜತ್ ಹಾಗೂ ಶೋಭಾ ಶೆಟ್ಟಿ ಮಧ್ಯೆ ಒಬ್ಬರನ್ನು ತಂಡದ ನಾಯಕತ್ವದಿಂದ ಹೊರಗಿಡುವ ಚಟುವಟಿಕೆಯನ್ನು ಬಿಗ್ ಬಾಸ್ ನೀಡಿದರು.

ಈ ವಿಚಾರದ ಸಲುವಾಗಿ ಈಗಾಗಲೇ ಶೋಭಾ ಶೆಟ್ಟಿ ಅವರು ಉಗ್ರಂ ಮಂಜು ಜತೆ ಜಗಳವಾಡಿದ್ದಾರೆ. ಇದೀಗ ಹೊಸ ಪ್ರೋಮೋದಲ್ಲಿ ಅನರ್ಹ ಹೇಳಿದ ಗೌತಮಿಗೆ ನಗುತ್ತಲೇ ಶೋಭಾ ಶೆಟ್ಟಿ ಟಕ್ಕರ್ ನೀಡಿದ್ದಾರೆ. ಅನರ್ಹ ನೀಡಲು ಕಾರಣ ಕೊಟ್ಟ ಗೌತಮಿಗೆ ನಿಮ್ಮಲ್ಲಿ ಪಾಸಿಟಿವ್‌ ಇಲ್ವೇ ಇಲ್ಲ, ಇರೋದೆಲ್ಲ ನೆಗೆಟಿವ್‌ ಎಂದು ಶೋಭಾ ಚಾಟಿ ಬೀಸಿದ್ದಾರೆ.

ಅನರ್ಹ ನೀಡಲು ಗೌತಮಿ ನೀಡಿದ ಕಾರಣ ಹೀಗಿದೆ:  ಶೋಭಾ ಅವರು ಅನರ್ಹ ಅಂತ ಯಾಕೆ ಹೇಳುತ್ತಿದ್ದೇನೆ ಎಂದರೆ ಮೊದಲಿಗೆ ನನ್ನ ಮುಖವಾಡ ಕಳಚಬೇಕು ಎನ್ನುವುದು ಶೋಭಾ ಅವರ ಗುರಿ. ನಿಮ್ಮ ಟೀಂಗೆ ಬಂದರೆ ನೀವು ಅದೇ ಗುಂಗಿನಲ್ಲಿ ಇರುತ್ತೀರಾ ಹೊರತು, ನನ್ನ ಪಾಸಿಟಿವ್‌ ಕಡೆ ನೀವು ನೋಡೋದೆ ಇಲ್ಲ. ನೆಗೆಟಿವ್‌ ಫಸ್ಟ್‌ ನೋಡುತ್ತೀರಾ ಅಂದರೆ ತಂಡದ ನಾಯಕನಿಗೆ ಬೇಕಾದ ಲಕ್ಷಣ ಅಲ್ಲ ಅನ್ಸತ್ತೆ ಎಂದಿದ್ದಾರೆ.

ಅದಕ್ಕೆ ಶೋಭಾ ಶೆಟ್ಟಿ ಅವರು ನಿಮ್ಮ ಮುಖವಾಡ ಕಳಚುತ್ತೀನಿ ಅಂತ ಭಯ ಪಡುತ್ತಿದ್ದೀರಾ? ಎಂದು ನೇರವಾಗಿ ಪ್ರಶ್ನೆಮಾಡಿದ್ದಾರೆ. ಅದು 200ದಿನ ಕಳೆದರೂ ಸಾಧ್ಯವಿಲ್ಲ ಎಂದು ಗೌತಮಿ ತಿರುಗೇಟು ನೀಡಿದ್ದಾರೆ.

ಅದಕ್ಕೆ ಶೋಭಾ ಶೆಟ್ಟಿ ಮಾತನಾಡಿ, ಆಡಿಯನ್ಸ್‌ ಆಗಿ ನಾನು ನಿಮ್ಮನ್ನು ಹೊರಗೆ ನೋಡಿದಾಗ ಪಾಸಿಟಿವ್‌ ಅಂತ ಹೇಳುತ್ತೀರಾ. ಆದರೆ ನಿಮ್ಮಲ್ಲಿ ಇರೋದೆಲ್ಲ ನೆಗೆಟಿವ್‌. ಪಾಸಿಟಿವ್‌ ನಿಮಗೆ ಇಲ್ವೇ ಇಲ್ಲ. ಇರೋದೆಲ್ಲ ನೆಗೆಟಿವ್‌ ಎಂದಿದ್ದಾರೆ. ಅದಕ್ಕೆ ಗೌತಮಿ ಅವರು ಪಾಸಿಟಿವಿಟಿ ನನಗೆ ಅಂತ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.

ಇನ್ನು ಶೋಭಾ ಅವರೂ ಕೂಡ ಬರಬರುತ್ತಲೇ ಹನುಮಂತನ ಹಿಂದೆ ಬಿದ್ದಿದ್ದಾರೆ. ಚೈತ್ರಾ ಅವರು ಹಾಸ್ಪಿಟಲ್‌ ಹೋಗಿ ಬಂದಾಗಲೂ ಹನುಮಂತ ಕೊಟ್ಟ ಉತ್ತರಕ್ಕೆ ಕಿಚ್ಚ ಅವರೇ ಹೊಗಳಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments