ಬಿಗ್ ಬಾಸ್ ಕನ್ನಡ 11ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟು ಎರಡನೇ ವಾರಕ್ಕೆ ದೊಡ್ಮನೆಯಿಂದ ಹೊರನಡೆದ ಶೋಭಾ ಶೆಟ್ಟಿ ಇದೀಗ ಆಸ್ಪತ್ರೆ ಸೇರಿದ್ದಾರೆ.
ತೆಲುಗು ಬಿಗ್‌ಬಾಸ್‌ನಲ್ಲಿ ಆವೇಶದಿಂದ ಆಟವಾಡಿ ಹವಾ ಸೃಷ್ಟಿಸಿದ್ದ ಶೋಭಾ ಶೆಟ್ಟಿ ಅವರು ಕನ್ನಡದ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟು ಮೊದಲ ವಾರದಲ್ಲಿ ಸ್ಪರ್ಧಿಗಳಿಗೆ ತಮ್ಮ ಮಾತಿನಿಂದ ತಿವಿದು, ಶಾಕ್ ನೀಡಿದ್ದರು.
ಎರಡನೇ ವಾರಕ್ಕೆ ಸೈಲೆಂಟ್ ಆದ ಅವರು ಕಳಪೆ ಹಣೆಪಟ್ಟಿಯೊಂದಿಗೆ ಜೈಲು ಸೇರಿದ್ದರು. ಆದರೆ ವಾರದ ಕೊನೆಯಲ್ಲಿ ನಾಮಿನೇಷನ್‌ನಿಂದ ಸೇವ್ ಆದರೂ, ಇಲ್ಲಿರಲೂ ಸಾಧ್ಯವಿಲ್ಲ, ಆರೋಗ್ಯದ ನೆಪವೊಡ್ಡಿ ಮನೆಯಿಂದ ಹೊರನಡೆದರು. ಹೀಗಾಗಿ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.
ಮನೆಯಿಂದ ಹೊರಬಂದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದೀಗ ಆಸ್ಪತ್ರೆ ಸೇರಿರುವ ಬಗ್ಗೆ ಶೋಭಾ ಶೆಟ್ಟಿ ಅವರು ಪೋಸ್ಟ್ ಹಾಕಿದ್ದಾರೆ.
ಕಳೆದ ವಾರ 'ಬಿಗ್ ಬಾಸ್'ನಿಂದ ಎಲಿಮಿನೇಷನ್ ಆದ ಬಳಿಕ ಆಸ್ಪತ್ರೆಗೆ ನಟಿ ದಾಖಲಾಗಿದ್ದಾರೆ. ಉತ್ತಮಗೊಳ್ಳುತ್ತಿದ್ದೇನೆ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ನಿಮ್ಮ ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದು ಶೋಭಾ ಶೆಟ್ಟಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದಾರೆ. ಆಸ್ಪತ್ರೆಯ ಬೆಡ್‌ನಿಂದಲೇ ಅಭಿಮಾನಿಗಳ ಪ್ರೀತಿಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ.