BigBoss Season 11: ಕ್ಲಾರಿಟಿ ವಿಚಾರಕ್ಕೆ ಹನುಮಂತುಗೆ ಟಾಂಗ್ ಕೊಟ್ಟ ಭವ್ಯಾ

Sampriya
ಮಂಗಳವಾರ, 19 ನವೆಂಬರ್ 2024 (16:45 IST)
Photo Courtesy X
ಬೆಂಗಳೂರು: ಬೆಳ್ಳಂಬೆಳಗ್ಗೆಯೇ ಇಬ್ಬರು ವೆಲ್ಡ್‌ ಕಾರ್ಡ್‌ ಸ್ಪರ್ಧಿಗಳನ್ನು ನೋಡಿ ಶಾಕ್ ಆಗಿದ್ದ ಮನೆ ಸದಸ್ಯರಿಗೆ ಇದೀಗ ಓಪನ್‌ ನಾಮಿನೇಷನ್ ಪ್ರಕ್ರಿಯೆ ಮತ್ತಷ್ಟು ಬಿಸಿ ಹೆಚ್ಚಿಸಿದೆ.

ನಿನ್ನೆ ನಡೆದ ಎಪಿಸೋಡ್‌ನಲ್ಲಿ  ನಾಮಿನೇಟ್‌ ಮಾಡಿದ್ದಕ್ಕೆ ಗೌತಮಿ ಹಾಗೂ ಉಗ್ರಂ ಮಂಜು ಅವರು ತ್ರಿವಿಕ್ರಮ್, ಮೋಕ್ಷಿತಾ ಹಾಗೂ ಐಶ್ವರ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮಂಜು ಅವರು ಇನ್ಮುಂದೆ ನನ್ನನ್ನು ಅಣ್ಣ ಎಂದು ಕರೆಯಬೇಡಿ ಎಂದು ಐಶ್ವರ್ಯಾಗೆ ಓಪನ್ ಆಗಿ ಹೇಳಿದ್ದಾರೆ. ಒಟ್ಟಾರೆ ಟಾಸ್ಕ್ ಶುರುವಾಗುವುದಕ್ಕಿಂತ ಮುಂಚೆನೇ ಇದೀಗ ಮನೆ ಮಂದಿಯಲ್ಲಿ ಓಪನ್‌ ನಾಮಿನೇಷನ್ ಪ್ರಕ್ರಿಯೆ ಸ್ಪರ್ಧಿಗಳ ಮಧ್ಯೆ ಜಗಳ, ಮುನಿಸು, ಅಸಮಾಧಾನಕ್ಕೆ ಕಾರಣವಾಗಿದೆ.

ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ  ಕ್ಲಾರಿಟಿ ವಿಷಯ ವಿಚಾರವಾಗಿ ಹನುಮಂತು ಅವರನ್ನು ಮನೆಯ ಕ್ಯಾಪ್ಟನ್ ಭವ್ಯಾ ಅವರು ನಾಮಿನೇಟ್ ಮಾಡಿದ್ದಾರೆ.  

ಮನೆಯಿಂದ ಹೊರಹೋಗಲು ಹನುಮಂತು ಅವರನ್ನು ಆಯ್ಕೆ ಮಾಡಿದ ಭವ್ಯಾ ಅವರು ಯಾವುದಾದರೂ ಆಯ್ಕೆ ಪ್ರಕ್ರಿಯೆ ಬಂದಾಗ ಎದುರಾಳಿಗಳು ಪ್ರಶ್ನೆ ಕೇಳಿದಾಗ, ನನ್ದು ನಾ ಹೇಳಿದ್ದೀನಿ, ನಿನ್ದು ನೀ ಬಂದಾಗ ಹೇಳು ಎಂದು ಹೇಳುತ್ತಾರೆ. ಈ ಮನೆಯಲ್ಲಿ ಇರಬೇಕಾದರೆ ಸೂಕ್ತ ಕಾರಣವನ್ನು ನೀಡಿ, ಕ್ಲಾರಿಫೈ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಈ ಹಿನ್ನೆಲೆ ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದು ಕಾರಣ ನೀಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

ಮುಂದಿನ ಸುದ್ದಿ
Show comments