Publish Date: Mon, 14 Feb 2022 (11:55 IST)
Updated Date: Mon, 14 Feb 2022 (09:45 IST)
ಬೆಂಗಳೂರು: ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬಿಗ್ ಸಿನಿಮಾಗಳ ರಿಲೀಸ್ ದಿನಾಂಕಗಳು ಪ್ರಕಟವಾಗಿದ್ದು, ಯಾವ ಸಿನಿಮಾಗಳು ಯಾವ ದಿನಾಂಕದಂದು ಬಿಡುಗಡೆಯಾಗಲಿದೆ ಎಂದು ನೋಡೋಣ.
ಫೆಬ್ರವರಿ 24 ರಂದು ಅಜಿತ್ ನಾಯಕರಾಗಿರುವ ತಮಿಳಿನ ವಲಿಮೈ ಸಿನಿಮಾ ಬಿಡುಗಡೆಯಾಗಲಿದೆ. ಮಾರ್ಚ್ 11 ರಂದು ಪ್ರಭಾಸ್ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ ಸಿನಿಮಾ ರಿಲೀಸ್ ಆಗುತ್ತಿದೆ.
ಜನವರಿಯಲ್ಲೇ ಬಿಡುಗಡೆಯಾಗಬೇಕಿದ್ದ ಆರ್ ಆರ್ ಆರ್ ಸಿನಿಮಾ ಮಾರ್ಚ್ 25 ರಂದು ಬಿಡುಗಡೆಯಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. ಏಪ್ರಿಲ್ 14 ಕೆಜಿಎಫ್ 2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿದೆ. ಏಪ್ರಿಲ್ 28 ರಂದು ತಮಿಳಿನ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಬಿಡುಗಡೆಯಾಗಲಿದೆ. ಇವಿಷ್ಟು ಬಿಗ್ ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಿಸಿದ್ದು, ಇನ್ನಷ್ಟು ಸಿನಿಮಾಗಳ ದಿನಾಂಕ ಘೋಷಣೆಯಾಗಬಹುದು.