Publish Date: Sun, 06 Oct 2024 (17:03 IST)
Updated Date: Sun, 06 Oct 2024 (17:09 IST)
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಈಗ ಹತ್ಯೆ ಆರೋಪದಲ್ಲಿ ಬಂಧಿತರಾಗಿರುವ ನಟ ದರ್ಶನ್ ನಾಯಕರಾಗಿರುವ ಡೆವಿಲ್ ಸಿನಿಮಾಗೇ ಸವಾಲು ಹಾಕಿದ್ದಾರೆ.
ಪ್ರಥಮ್ ಈ ಹಿಂದೆ ದರ್ಶನ್ ಬಂಧಿತರಾಗಿದ್ದಾಗ ಪೊಲೀಸ್ ಠಾಣೆ ಮುಂದೆ ಜೈಕಾರ ಕೂಗುತ್ತಿದ್ದ ದರ್ಶನ್ ಅಭಿಮಾನಿಗಳ ಬಗ್ಗೆ ಖಡಕ್ ಆಗಿ ಮಾತನಾಡಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಾದ ಬಳಿಕ ದರ್ಶನ್ ಅಭಿಮಾನಿಗಳು ಪ್ರಥಮ್ ಗೆ ಬೆದರಿಕೆ ಹಾಕಿದ್ದರು. ಈ ವಿಚಾರವಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು.
ಇದು ಇಷ್ಟಕ್ಕೇ ನಿಂತಿಲ್ಲ. ಪ್ರಥಮ್ ಈಗ ಡೆವಿಲ್ ಸಿನಿಮಾಗೇ ಸವಾಲು ಹಾಕಿದ್ದಾರೆ. ದರ್ಶನ್ ನಾಯಕರಾಗಿರುವ ಡೆವಿಲ್ ಸಿನಿಮಾ ಕೊನೆ ಹಂತದ ಶೂಟಿಂಗ್ ನಲ್ಲಿದೆ. ಆಗಲೇ ದರ್ಶನ್ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆದರು. ಇದೀಗ ಸಿನಿಮಾ ಭವಷ್ಯ ಅತಂತ್ರವಾಗಿದೆ. ದರ್ಶನ್ ಬಿಡುಗಡೆಯಾಗದೇ ಸಿನಿಮಾ ಪೂರ್ಣಗೊಳಿಸಲು ಸಾಧ್ಯವಿಲ್ಲ.
ಈಗ ಪ್ರಥಮ್ ನಾಯಕರಾಗಿರುವ ಕರ್ನಾಟಕದ ಅಳಿಯ ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಇದರ ನಡುವೆ ದರ್ಶನ್ ಅಭಿಮಾನಿಗಳು ಡೆವಿಲ್ ಮತ್ತು ಕರ್ನಾಟಕದ ಅಳಿಯ ಒಟ್ಟಿಗೇ ಬಿಡಗುಡೆಯಾದರೆ ಪ್ರಥಮ್ ಸಿನಿಮಾ ನೋಡೋರೇ ಇರಲ್ಲ ಎಂದು ಕಾಲೆಳೆದಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳಿಗೆ ಸವಾಲು ಹಾಕಿರುವ ಪ್ರಥಮ್ ನಾವು ಡೆವಿಲ್ ಜೊತೆಗೇ ಬರಲಿದ್ದೇವೆ ಎಂದಿದ್ದಾರೆ.