Webdunia - Bharat's app for daily news and videos

Install App

ಭೂತ್ ಬಂಗ್ಲಾದ ಫಸ್ಟ್‌ ಲುಕ್‌ ಔಟ್‌: ಬರ್ತಡೇ ಬಾಯ್‌ ಅಕ್ಷಯ್‌ಕುಮಾರ್‌ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ

Sampriya
ಸೋಮವಾರ, 9 ಸೆಪ್ಟಂಬರ್ 2024 (13:59 IST)
Photo Courtesy X
ಮುಂಬೈ: 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಾಲಿವುಡ್‌ ತಾರೆ ಅಕ್ಷಯ್‌ ಕುಮಾರ್‌ ಅವರಿಗೆ ಭೂತ್ ಬಂಗ್ಲಾ ಚಿತ್ರದ ಫಸ್ಟ್‌ ಲುಕ್‌ ಅನ್ನು ಬಿಡುಗಡೆ ಮಾಡುವುದರ ಮೂಲಕ ಚಿತ್ರತಂಡ ಶುಭಕೋರಿದೆ.

ಕೈಯಲ್ಲಿ ಹಾಲಿನ ಬೌಲ್ ಹಿಡಿದು, ನಟನ ಬೆನ್ನ ಮೇಲೆ ಕಪ್ಪು ಬಣ್ಣದ ಬೆಕ್ಕೊಂದು ಉಗ್ರವಾಗಿ ಪೋಸ್ ಕೊಟ್ಟಿದೆ. ನಟ ಹಾಲನ್ನು ಬೆಕ್ಕಿನಂತೆ ಕುಡಿಯುತ್ತಿದ್ದಾರೆ. ಅವರ ಹಿಂದೆ ಭಯಾನಕವಾಗಿರುವ ಅರಮನೆಯೊಂದು ಇದೆ. ಸದ್ಯ ಈ ಪೋಸ್ಟರ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಹಾರರ್‌ ಮತ್ತು ಹಾಸ್ಯ ಪ್ರಧಾನ ಭೂತ್ ಬಂಗ್ಲಾ ಚಿತ್ರದ ಮೂಲಕ ನಿರ್ದೇಶಕ ಪ್ರಿಯದರ್ಶನ್ ಹಾಗೂ ಅಕ್ಷಯ್ ಕುಮಾರ್ ಅವರು 14 ವರ್ಷಗಳ ಬಳಿಕ  ಒಟ್ಟಿಗೆ ಕೆಲಸ ಮಾಡಲಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅಕ್ಷಯ್‌ 2010ರಲ್ಲಿ ತೆರೆಕಂಡ ಖಟ್ಟಾ ಮೀಠಾದಲ್ಲಿ ಪ್ರಿಯದರ್ಶನ್ ಜತೆಗೆ ಕೆಲಸ ಮಾಡಿದ್ದೆ. 14 ವರ್ಷಗಳ ಬಳಿಕ ಮತ್ತೆ ಅವರೊಂದಿಗೆ ಸಿನಿಮಾ ಮಾಡಲು ಉತ್ಸುಕನಾಗಿದ್ದೇನೆ. ತೆರೆ ಮೇಲೆ ಈ ಚಿತ್ರ ಮ್ಯಾಜಿಕ್‌ ಮಾಡಲಿದೆ ನಿರೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ.

ಅಕ್ಷಯ್ ಮತ್ತು ಪ್ರಿಯದರ್ಶನ್, 'ಹೇರಾ ಫೇರಿ', 'ಗರಂ ಮಸಾಲಾ', 'ಭೂಲ್ ಭುಲೈಯಾ', 'ದೇ ದನಾ ದಾನ್', ಮತ್ತು 'ಭಾಗಂ ಭಾಗ್' ನಂತಹ ಹಲವಾರು ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ದಾಂಪತ್ಯಕ್ಕೆ 5 ವರ್ಷದ ಸಂಭ್ರಮ: ಪತ್ನಿ ರೇವತಿಗೆ ವಿಶೇಷವಾಗಿ ಶುಭಕೋರಿದ ನಿಖಿಲ್ ಕುಮಾರಸ್ವಾಮಿ

ಮಚ್ಚು ರೀಲ್ಸ್ ಪ್ರಕರಣ: 14 ದಿನ ಜೈಲು ಸೇರಬೇಕಿದ್ದ ರಜತ್ ಕಿಶನ್‌ಗೆ ಸಿಕ್ತು ಬಿಡುಗಡೆ ಭಾಗ್ಯ

ಮುಂದಿನ ಸುದ್ದಿ
Show comments