Webdunia - Bharat's app for daily news and videos

Install App

ಥಿಯೇಟರ್‌ನಲ್ಲಿ ಅಬ್ಬರಿಸುತ್ತಿರುವ 'ಭೀಮ', ಅಪ್ಪ- ಅಮ್ಮನ ಸಮಾಧಿಗೆ ಪೂಜೆ ಸಲ್ಲಿಸಿದ 'ದುನಿಯಾ ವಿಜಯ್'

Sampriya
ಸೋಮವಾರ, 19 ಆಗಸ್ಟ್ 2024 (15:18 IST)
Photo Courtesy X
ಬೆಂಗಳೂರು: ಕಳೆದ ವಾರ ತೆರೆಕಂಡ ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಭೀಮ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಎಲ್ಲ ಚಿತ್ರಮಂದಿರಗಳಲ್ಳೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಇದೇ ಖುಷಿಯಲ್ಲಿ ನಟ ವಿಜಯ್ ಅವರು ತಮ್ಮೂರಿಗೆ ತೆರಳಿ ತಂದೆ ತಾಯಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭೇಟಿಯ ವಿಡಿಯೋವನ್ನು ವಿಜಯ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಂದೆ ತಾಯಿಯನ್ನು ತುಂಬಾನೇ ಪ್ರೀತಿಸುತ್ತಿದ್ದ ವಿಜಯ್ ಅವರು ಪೋಷಕರ ಕೆಲಸಗಳನ್ನು ಮಾಡುತ್ತಾ ಖುಷಿ ಪಡುತ್ತಿದ್ದರು. ತಂದೆ ತಾಯಿ ಅಗಲಿದ ಬಳಿಕ ವಿಜಯ್ ಅವರು ತಮ್ಮೂರಿನಲ್ಲಿ ಅವರಿಗೆ ಸಮಾಧಿ ಕಟ್ಟಿದ್ದಾರೆ. ಇನ್ನೂ ವಿಶೇಷ ಏನೆಂದರೆ ಈಚೆಗೆ ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಅಲ್ಲೇ ಆಚರಿಸಿಕೊಂಡರು. ‌

ಸದ್ಯ ಭೀಮಗೆ ಪ್ರೇಕ್ಷಕರು ಫಿದಾ ಆಗಿದ್ದು, ಇದೇ ಖುಷಿಯಲ್ಲಿ ನಟ ತಮ್ಮೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಭೀಮ ಸಿನಿಮಾ ಆಗಸ್ಟ್ 9ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿತ್ತು. ವಿಜಯ್ ಅವರು ನಟಿಸಿ, ಅಭಿನಯಿಸಿರುವ ಸಿನಿಮಾ ಇದಾಗಿದ್ದು, ಟ್ರೇಲರ್ ಮೂಲಕವೇ ಭಾರೀ ಕುತೂಹಲ ಮೂಡಿಸಿತ್ತು. ಇದೀಗ ಮೂಲ ಮಾಹಿತಿ ಪ್ರಕಾರ ಅಂದಿನಿಂದ ಇಂದಿನವರೆಗೂ ಒಟ್ಟು 19.73 ಕೋಟಿ ಕಲೆಕ್ಷನ್ ಮಾಡಿದೆ. 10 ನೇ ದಿನದಲ್ಲಿ 21 ಕೋಟಿ ಕಲೆಕ್ಷನ್‌ನೊಂದಿಗೆ ಇನ್ನೂ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಇನ್ನೂ ಈ ಸಿನಿಮಾ ವಿಜಯ್ ಅವರಿಗೆ ತುಂಬಾನೇ ವಿಶೇಷವಾಗಿದ್ದು, ಸಿನಿಮಾ ಸಂಬಂಧಿ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಈ ಸಿನಿಮಾದ ಮೂಲಕ ಮತ್ತೇ ದುನಿಯಾ ವಿಜಯ್ ಅವರು ಅಬ್ಬರಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments