Daily Horoscope

BBK11: ಒಂದೇ ಒಂದು ಎಪಿಸೋಡ್ ನಿಂದ ಸಡನ್ ಆಗಿ ಏರಿಕೆಯಾಯ್ತು ಉಗ್ರಂ ಮಂಜು ಜನಪ್ರಿಯತೆ

Krishnaveni K
ಶುಕ್ರವಾರ, 4 ಅಕ್ಟೋಬರ್ 2024 (08:45 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಯಾರೂ ಊಹಿಸಿರದ ಸ್ಪರ್ಧಿ ಉಗ್ರಂ ಮಂಜು ದಿನೇ ದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅವರ ಆಟದ ಶೈಲಿ.

ಮೊನ್ನೆ ಒಂದೇ ಎಪಿಸೋಡ್ ನಿಂದ ಅವರ ಜನಪ್ರಿಯತೆ ಇದ್ದಕ್ಕಿದ್ದಂತೆ ಏರಿಕೆಯಾಗಿದೆ. ಅದಕ್ಕೆ ಕಾರಣ ಅವರು ಜನರನ್ನು ಮತ್ತು ಮನೆಯವರನ್ನು ಎಂಟರ್ ಟೈನ್ ಮಾಡಿರುವ ರೀತಿ. ಸಹ ಸ್ಪರ್ಧಿಗಳಾದ ಯಮುನಾ ಮತ್ತು ಲಾಯರ್ ಜಗದೀಶ್ ಅವರ ಮಿಮಿಕ್ರಿ ಮಾಡಿದ ಅವರು ಮನೆಯವರನ್ನೆಲ್ಲಾ ನಗಿಸಿದ್ದಲ್ಲದೆ, ವೀಕ್ಷಕರಿಗೂ ಮನರಂಜನೆ ಒದಗಿಸಿದ್ದಾರೆ.

ಉಗ್ರಂ ಮಂಜು ಬಗ್ಗೆ ಯಾರಿಗೂ ಹೆಚ್ಚು ಗೊತ್ತಿರಲಿಲ್ಲ. ಆದರೆ ಕಳೆದ ಎರಡು ಎಪಿಸೋಡ್ ನಿಂದ ಅವರು ಜನರ ಗಮನಸೆಳೆಯುತ್ತಿದ್ದಾರೆ. ಇನ್ನೊಂದೆಡೆ ಎಗ್ಗಿಲ್ಲದೇ ಹಾರಾಡುತ್ತಿರುವ ಲಾಯರ್ ಜಗದೀಶ್ ಗೆ ಕೌಂಟರ್ ಕೊಡಲು ಸದ್ಯಕ್ಕೆ ಮನೆಯಲ್ಲಿ ಅವರೇ ಸರಿಯಾದ ಸ್ಪರ್ಧಿ.

ಜೊತೆಗೆ ಆಟದಲ್ಲೂ ಪ್ರಾಮಾಣಿಕವಾಗಿ ಆಡುತ್ತಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯ. ಈ ಕಾರಣಕ್ಕೆ ಅವರ ಜನಪ್ರಿಯತೆ ಹೆಚ್ಚಾಗುತ್ತಿದೆ. ಹಲವರು ನಮ್ಮ ಸಪೋರ್ಟ್ ಉಗ್ರಂ ಮಂಜುಗೆ ಎನ್ನುವಷ್ಟು ಅವರು ಜನಪ್ರಿಯತೆ ಗಳಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಇಂಗ್ಲಿಷ್ ಮಾತನಾಡಿದ್ರೂ ಬಿಗ್ ಬಾಸ್ ಸುಮ್ಮನಿರೋದು ಯಾಕೆ

ಮೋದಿ ಹೊಗಳಿದ್ದಕ್ಕೇ… ಅನಂತನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇಂಥಾ ಮಾತುಗಳೇ..

ಡಯಟ್ ನೆಪ ಹೇಳಿ ಗಣೇಶನ ಪ್ರಸಾದ ನಿರಾಕರಿಸಿದ ರಣಬೀರ್ ಕಪೂರ್: ಬೀಫ್ ಕೊಟ್ಟಿದ್ರೆ… ನೆಟ್ಟಿಗರ ಟ್ರೋಲ್ Video

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments