Webdunia - Bharat's app for daily news and videos

Install App

BBK 11: ಇಷ್ಟು ದಿನ ಸೈಲೆಂಟ್ ಆಗಿದ್ದ ಮೋಕ್ಷಿತಾ ವಯಲೆಂಟ್ ಆಗಿದ್ದಕ್ಕೆ ಕಾರಣವೇನು ಗೊತ್ತಾ

Krishnaveni K
ಸೋಮವಾರ, 28 ಅಕ್ಟೋಬರ್ 2024 (11:45 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಇಷ್ಟು ದಿನ ಸೈಲೆಂಟ್ ಆಗಿದ್ದ ನಟಿ ಮೋಕ್ಷಿತಾ ಇದೀಗ ಇದ್ದಕ್ಕಿದ್ದಂತೆ ಇನ್ಮುಂದೆ ಬೇರೇನೇ ಲೆಕ್ಕ ಎಂದು ಫುಲ್ ವಯಲೆಂಟ್ ಆಗಿದ್ದಾರೆ. ಅವರ ಈ ಬದಲಾವಣೆಗೆ ಕಾರಣವೇನು ಗೊತ್ತಾ?

ಮೋಕ್ಷಿತಾ ಸೈಲೆಂಟ್ ಆಗಿರುತ್ತಾರೆ ಎಂದು ಎಲ್ಲಾ ವೀಕ್ಷಕರೂ ಕಂಪ್ಲೇಂಟ್ ಮಾಡುತ್ತಿದ್ದರು. ಕಿಚ್ಚ ಸುದೀಪ್ ಕೂಡಾ ಈ ಮೊದಲು ಇದೇ ಸಂದೇಶವನ್ನು ಹೇಳಿದ್ದರು. ಮೋಕ್ಷಿತಾ ಸೇರಿದಂತೆ ಕೆಲವೊಂದು ಸ್ಪರ್ಧಿಗಳು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದಿದ್ದರು. ಸಹ ಸ್ಪರ್ಧಿಗಳೂ ಮೋಕ್ಷಿತಾರನ್ನು ಇದೇ ಕಾರಣಕ್ಕೆ ನಾಮಿನೇಟ್ ಮಾಡುತ್ತಿದ್ದರು.

ಆದರೆ ಇಂದಿನಿಂದ ಮೋಕ್ಷಿತಾ ಸಂಪೂರ್ಣ ಬದಲಾಗಿದ್ದಾರೆ. ಅದಕ್ಕೆ ಕಾರಣ ತ್ರಿವಿಕ್ರಮ್ ಆಡಿದ ಮಾತು. ಮೋಕ್ಷಿತಾ ಬಗ್ಗೆ ಮಂಜು ಜೊತೆ ತ್ರಿವಿಕ್ರಮ್ 10 ವಾರ ಇರುವುದಕ್ಕೆ ಬಂದಿರುವುದು ಎಂದು ಹಗುರವಾಗಿ ಮಾತನಾಡಿದ್ದಾರೆ. ಇದನ್ನು ಮಂಜು ಎಲ್ಲರ ಎದುರು ಹೇಳಿದ್ದಾರೆ. ಇದು ಮೋಕ್ಷಿತಾ ಕಿವಿಗೂ ಬಂದಿದ್ದು, ಈವತ್ತಿನಿಂದ ಆಟ ಶುರು ಎಂದು ಸವಾಲು ಹಾಕಿದ್ದಾರೆ.

ನಾನು ಹತ್ತೇ ವಾರಕ್ಕೆ ಇರಲು ಬಂದವಳು ಎಂದು ಡಿಸೈಡ್ ಮಾಡಲು ನೀವು ಯಾರು? ಈವತ್ತಿಂದ ಕೌಂಟು ಶುರು. ಯಾರು ಯಾರು ಈ ಮನೆಯಲ್ಲಿ 10 ವಾರ ಇರಕ್ಕೆ ಬಂದಿರುವುದು ಎಂದು ನಾನೂ ನೋಡ್ತೀನಿ. ನೀವೊಬ್ಬ ಗೋಮುಖ ವ್ಯಾಘ್ರ ಎಂದು ಮೋಕ್ಷಿತಾ ಸವಾಲು ಹಾಕಿದ್ದಾರೆ. ಹೀಗಾಗಿ ಇಂದಿನಿಂದ ಮೋಕ್ಷಿತಾ ಆಟದಲ್ಲಿ ಬದಲಾವಣೆ ಕಾಣುತ್ತಾ ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಉಪೇಂದ್ರಗೆ ಜೋಡಿಯಾದ ಮಾಲಾಶ್ರೀ ಮಗಳು ಆರಾಧನಾ, ವಯಸ್ಸಿನ ಅಂತರ ಬಗ್ಗೆ ಚಿತ್ರತಂಡ ಹೀಗೇ ಹೇಳಿದ್ದು

ಈ ಒಬ್ಬ ವ್ಯಕ್ತಿಯನ್ನು ನೆಪ ಮಾಡಿ ಜಾಮೀನು ರದ್ದು ಮಾಡಬೇಡಿ ಎನ್ನುತ್ತಿರುವ ಪವಿತ್ರಾ ಗೌಡ

ಅಬ್ಬಬ್ಬಾ ಏನಿದೂ ದೀಪಿಕಾ ಪಡುಕೋಣೆ ಹವಾ: ಇನ್‌ಸ್ಟಾಗ್ರಾಂನಲ್ಲಿ ರೊನಾಲ್ಡೊ, ಪಾಂಡ್ಯರನ್ನೇ ಮೀರಿಸಿದ ಕನ್ನಡತಿ

ಡಿವೋರ್ಸ್ ವದಂತಿ ಬೆನ್ನಲ್ಲೇ ಹನ್ಸಿಕಾ ಇನ್‌ಸ್ಟಾಗ್ರಾಂನಲ್ಲಿ ಭಾರೀ ಬದಲಾವಣೆ

ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

ಮುಂದಿನ ಸುದ್ದಿ
Show comments