Select Your Language

Notifications

webdunia
webdunia
webdunia
webdunia

ಈ ಹುಡುಗಿಯ ಕೈ ಹಿಡಿಯಲಿದ್ದಾರಾ ಬಾಹುಬಲಿ ಪ್ರಭಾಸ್ ?!

ಈ ಹುಡುಗಿಯ ಕೈ ಹಿಡಿಯಲಿದ್ದಾರಾ ಬಾಹುಬಲಿ ಪ್ರಭಾಸ್ ?!
Hyderabad , ಮಂಗಳವಾರ, 30 ಮೇ 2017 (09:49 IST)
ಹೈದರಾಬಾದ್: ಬಾಹುಬಲಿ ಬಿಡುಗಡೆಯಾದ ಮೇಲೆ ನಟ ಪ್ರಭಾಸ್ ಮನೆ ಮಾತಾದರು. ಹುಡುಗಿಯರು ಅವರ ಫೋಟೋ ಇಟ್ಟುಕೊಂಡು ಪೂಜೆ ಮಾಡುವ ಮಟ್ಟಕ್ಕೆ ಬಂದರು. ಇಂತಿಪ್ಪ ಪ್ರಭಾಸ್ ಕೊನೆಗೂ ರಿಯಲ್ ಲೈಫ್ ನಲ್ಲಿ ಜೋಡಿ ಕಂಡುಕೊಂಡಿದ್ದಾರಾ?!

 
ಮೂಲಗಳ ಪ್ರಕಾರ ಉದ್ಯಮಿಯೊಬ್ಬರ ಮೊಮ್ಮಗಳನ್ನು ಪ್ರಭಾಸ್ ಮದುವೆಯಾಗುವ ಸಾಧ್ಯತೆಯಿದೆಯಂತೆ. ಈ ಬಗ್ಗೆ ಉದ್ಯಮಿಯ ಕುಟುಂಬದವರು ಪ್ರಭಾಸ್ ಮನೆಯವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ ಅಂತಿಮ ಘೋಷಣೆ ಇನ್ನೂ ಹೊರಬಿದ್ದಿಲ್ಲ ಎಂದು ಗಾಸಿಪ್ ಹಬ್ಬಿದೆ.

35 ವರ್ಷದ ಪ್ರಭಾಸ್ ಬಾಹುಬಲಿ ಚಿತ್ರ ಬಿಡುಗಡೆಯಾದ ಮೇಲೆ ಮದುವೆ ಬಗ್ಗೆ ಯೋಚಿಸುವುದಾಗಿ ಹಿಂದೊಮ್ಮೆ ಹೇಳಿಕೊಂಡಿದ್ದರು. ಇದೀಗ ಮನೆ ಮಾತಾಗಿರುವ ಪ್ರಭಾಸ್ ರ ಕೈ  ಹಿಡಿಯಲು ಯಾವ ಹುಡುಗಿಯೂ ಹಿಂದೆ ಮುಂದೆ ಯೋಚಿಸುವುದಿಲ್ಲ.

ಅಂತಹದ್ದರಲ್ಲಿ ರಾಸಿ ಸಿಮೆಂಟ್ ಸಂಸ್ಥೆಯ ಮಾಲಿಕರ ಮೊಮ್ಮಗಳ ಜತೆ ಪ್ರಭಾಸ್ ಮದುವೆ ಮಾತುಕತೆ ನಡೆದಿದೆ ಎಂಬ ಸುದ್ದಿ ಹಬ್ಬಿದೆ. ಇದು ನಿಜವೋ ಸುಳ್ಳೋ ಎಂದು ತಿಳಿಯಬೇಕಿದ್ದರೆ, ಪ್ರಭಾಸ್ ಅಧಿಕೃತ ಘೋಷಣೆಯವರೆಗೂ ಕಾಯಲೇಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ಅಂಕುಶ ಹಾಕಿದ ಸೂಪರ್ ಸ್ಟಾರ್ ರಜನಿ