Select Your Language

Notifications

webdunia
webdunia
webdunia
webdunia

ಬಾಹುಬಲಿ 2 ಚಿತ್ರ ರೂ.500 ಕೋಟಿ ಬಿಜಿನೆಸ್

ಬಾಹುಬಲಿ 2 ಚಿತ್ರ ರೂ.500 ಕೋಟಿ ಬಿಜಿನೆಸ್
Hyderabad , ಗುರುವಾರ, 2 ಫೆಬ್ರವರಿ 2017 (11:58 IST)
ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಾಹುಬಲಿ 2 ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಸೃಷ್ಟಿಸಿದೆ. ಈ ಚಿತ್ರ ಜಗತ್ತಿನಾದ್ಯಂತ ಈಗಾಗಲೆ ರೂ.500 ಕೋಟಿ ಬಿಜಿನೆಸ್ ಮಾಡಿದೆ ಎಂಬ ಸುದ್ದಿ ಇದೆ. ಈ ಮೂಲಕ ಬಿಡುಗಡೆಗೂ ಮುನ್ನವೇ ರೂ.500 ಕೋಟಿ ಕ್ಲಬ್ ಸೇರಿದ ಏಕೈಕ ಚಿತ್ರ ಎಂಬ ಗರಿಮೆಗೆ ಪಾತ್ರವಾಗಿದೆ. 
 
ಕೇವಲ ವಿತರಣೆ ಹಕ್ಕುಗಳು, ಸ್ಯಾಟಲೈಟ್ ರೈಟ್ಸ್ ಮೂಲಕವೇ ಈ ಚಿತ್ರ ರೂ.500 ಕೋಟಿ ಗಳಿಸಿದೆ ಎಂದು ಭಾರತೀಯ ಚಿತ್ರೋದ್ಯಮ ಟ್ರ್ಯಕರ್ ರಮೇಶ್ ಬಾಲ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿಕೊಂಡು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 
 
ಬಾಹುಬಲಿ ಚಿತ್ರದ ಮುಂದುವರಿದ ಭಾಗವಾಗಿ ಬರುತ್ತಿರುವ ಈ ಚಿತ್ರದ ಪಾತ್ರವರ್ಗದಲ್ಲಿ ಪ್ರಭಾಸ್, ತಮನ್ನಾ, ಅನುಷ್ಕಾ, ರಾಣಾ ದಗ್ಗುಬಾಟಿ ಇದ್ದಾರೆ. ಬಾಹುಬಲಿ ಚಿತ್ರವನ್ನು ಸರಿಸುಮಾರು ರೂ.180 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಆ ಚಿತ್ರ ಜಗತ್ತಿನಾದ್ಯಂತ ರೂ.600 ಕೋಟಿ ವಸೂಲಿ ಮಾಡಿ... 2015ರಲ್ಲಿ ಭಾರತದಲ್ಲೇ ಅತ್ಯಧಿಕ ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಬಾಹುಬಲಿ 2 ಚಿತ್ರ ಏಪ್ರಿಲ್ 28ಕ್ಕೆ ಪ್ರೇಕ್ಷಕರ ಮುಂದೆ ಬರುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೂ.150 ಕೋಟಿ ವೆಚ್ಚದಲ್ಲಿ ಶಾರುಖ್ ಸಿನಿಮಾ?