Select Your Language

Notifications

webdunia
webdunia
webdunia
webdunia

ರೂ.150 ಕೋಟಿ ವೆಚ್ಚದಲ್ಲಿ ಶಾರುಖ್ ಸಿನಿಮಾ?

ರೂ.150 ಕೋಟಿ ವೆಚ್ಚದಲ್ಲಿ ಶಾರುಖ್ ಸಿನಿಮಾ?
Mumbai , ಗುರುವಾರ, 2 ಫೆಬ್ರವರಿ 2017 (11:53 IST)
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಸದ್ಯಕ್ಕೆ ’ರಯೀಸ್’ ಸಿನಿಮಾ ಯಶಸ್ವಿಯಾದ ಖುಷಿಯಲ್ಲಿದ್ದಾರೆ. ಈ ಸಿನಿಮಾ ಬಳಿಕ ಶಾರುಖ್ ಅವರು ಆನಂದ್ ಎ ರಾಯ್ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರ ಶಾರುಖ್ ಜೀವನದಲ್ಲೇ ಒಂದು ಮೈಲಿಗಲ್ಲು ಎನ್ನಲಾಗಿದೆ. 
 
ಯಾಕೆಂದರೆ ಶಾರುಖ್ ಈ ಸಿನಿಮಾದಲ್ಲಿ ’ಕುಬ್ಜ’ ಪಾತ್ರದಲ್ಲಿ ಕಾಣಿಸಲಿದ್ದಾರೆ ಶಾರುಖ್ ಖಾನ್. ಕಿಂಗ್ ಖಾನ್ ವೃತ್ತಿಬದುಕಿನಲ್ಲೇ ಅದ್ದೂರಿಯಾಗಿ ನಿರ್ಮಿಸಲಾಗುತ್ತಿರುವ ಚಿತ್ರ ಇದಾಗಿದ್ದು ಮೂಲಗಳ ಪ್ರಕಾರ ಇದಕ್ಕಾಗಿ ರೂ.150 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಲಾಗುತ್ತಿದೆ.
 
ಈ ಸಿನಿಮಾಗೆ ಬಹಳಷ್ಟು ವಿಎಫ್‍ಎಕ್ಸ್ ಎಫೆಕ್ಟ್ಸ್ ಬೇಕಂತೆ. ಅದು ತುಂಬಾ ಖರ್ಚಿನಿಂದ ಕೂಡಿದ ಬಾಬತ್ತು ಎಂದು ಆನಂದ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಈಗಾಗಲೆ ಶಾರುಖ್ ಅವರನ್ನು ದ್ವಿಪಾತ್ರದಲ್ಲಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಇನ್ನು ಐದು ಅಡಿ ಎಂಟು ಇಂಚಿರುವ ಶಾರುಖ್ ಕುಬ್ಜನಾಗಿ ಹೇಗೆ ಕಾಣಿಸಲಿದ್ದಾರೆ ಎಂಬುದು ಕುತೂಹಲದ ವಿಷಯ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಬಜೆಟ್‍ ಬಗ್ಗೆ ಬಾಲಿವುಡ್ ತೀವ್ರ ನಿರುತ್ಸಾಹ