Select Your Language

Notifications

webdunia
webdunia
webdunia
webdunia

ಫ್ಯಾನ್ಸ್ ಗೆ ಪುನೀತ್ ಪತ್ನಿ ಅಶ್ವಿನಿ ಬರೆದ ಪತ್ರ ವೈರಲ್

ಫ್ಯಾನ್ಸ್ ಗೆ ಪುನೀತ್ ಪತ್ನಿ ಅಶ್ವಿನಿ ಬರೆದ ಪತ್ರ ವೈರಲ್
ಬೆಂಗಳೂರು , ಬುಧವಾರ, 17 ನವೆಂಬರ್ 2021 (09:15 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮನ ಕಾರ್ಯಕ್ರಮಕ್ಕೆ ಮುನ್ನ ಪತ್ನಿ ಅಶ್ವಿನಿ ಅಭಿಮಾನಿಗಳಿಗೆ ಬರೆದ ಪತ್ರವೊಂದು ವೈರಲ್ ಆಗಿದೆ.

ಅಶ್ವಿನಿ ಪುನೀತ್ ಇಷ್ಟು ದಿನ ತಮ್ಮ ಜೊತೆಗಿದ್ದು, ತಾವೂ ನೋವು ಅನುಭವಿಸಿದ ಅಭಿಮಾನಿಗಳಿಗೆ ಪತ್ರಮುಖೇನ ಧನ್ಯವಾದ ಸಲ್ಲಿಸಿದ್ದಾರೆ.

ಪುನೀತ್ ಅಗಲುವಿಕೆ ನಮ್ಮಷ್ಟೇ ನಿಮಗೂ ನೋವು ತಂದಿದೆ ಎಂದು ನನಗೆ ಗೊತ್ತು. ಆದರೆ ಇಂಥಾ ಕಠಿಣ ಪರಿಸ್ಥಿತಿಯಲ್ಲೂ ನೋವು ನುಂಗಿ ಎಲ್ಲಾ ಕಾರ್ಯಗಳನ್ನು ಶಾಂತ ರೀತಿಯಲ್ಲಿ ಮಾಡಲು ಅನುವು ಮಾಡಿಕೊಟ್ಟ ನಿಮಗೆ ಧನ್ಯವಾದಗಳು. ನಿಮ್ಮ ಮೆಚ್ಚಿನ ಅಪ್ಪು ಸಮಾಜಕಾರ್ಯಗಳನ್ನು ಆದರ್ಶವಾಗಿಟ್ಟುಕೊಂಡು ನೇತ್ರದಾನ, ಸಮಾಜ ಸೇವೆ ಮಾಡಲು ಮುಂದಾಗಿರುವ ನೀವೆಲ್ಲಾ ಅಭಿನಂದನಾರ್ಹರು. ಅವರು ಯಾವತ್ತೂ ನಿಮ್ಮ ಒಳ್ಳೆಯ ಕೆಲಸಗಳಲ್ಲಿ ಜೀವಂತವಾಗಿರುತ್ತಾರೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ನಾನು ಮತ್ತು ಕುಟುಂಬದವರು ಅಭಾರಿಗಳಾಗಿರುತ್ತೇವೆ’ ಎಂದು ಅಶ್ವಿನಿ ಪತ್ರದಲ್ಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ಬಿಕಿನಿ ಅವತಾರಕ್ಕೆ ವಿರಾಟ್ ಕೊಹ್ಲಿ ದಂಗು