Publish Date: Tue, 16 Nov 2021 (16:57 IST)
Updated Date: Tue, 16 Nov 2021 (16:59 IST)
ಬೆಂಗಳೂರು: ಅರಮನೆ ಮೈದಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೌರವಾರ್ಥ ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪತ್ನಿ ಅಶ್ವಿನಿ ಪುನೀತ್, ಪುತ್ರಿ ಧೃತಿ ಅರ್ಧದಿಂದಲೇ ತೆರಳಿದ್ದಾರೆ.
ಪತಿಯ ಸ್ಮರಣಾರ್ಥ ನಡೆಯುತ್ತಿರುವ ಕಾರ್ಯಕ್ರಮದ ವೇಳೆ ತೀರಾ ಭಾವುಕರಾಗಿರುವ ಅಶ್ವಿನಿ ಹೆಚ್ಚು ಹೊತ್ತು ಕಾರ್ಯಕ್ರಮದಲ್ಲಿ ಇರುವ ಶಕ್ತಿ ತನಗಿಲ್ಲ. ಹೀಗಾಗಿ ಸಿಎಂ ಭಾಷಣ ಮುಗಿದ ಮೇಲೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದರಂತೆ.
ಹೀಗಾಗಿ ಸಿಎಂ ಭಾಷಣ ಮುಗಿದ ತಕ್ಷಣವೇ ಅಶ್ವಿನಿ ಪುತ್ರಿ ಜೊತೆ ಸಭಾಂಗಣದಿಂದ ತೆರಳಿದ್ದಾರೆ. ಕಾರ್ಯಕ್ರಮದಲ್ಲಿ ಇದ್ದಷ್ಟು ಹೊತ್ತೂ ತೀರಾ ಭಾವುಕರಾಗಿ ಕಣ್ಣೊರೆಸುತ್ತಲೇ ಅವರು ಪಾಲ್ಗೊಂಡಿದ್ದರು.