Webdunia - Bharat's app for daily news and videos

Install App

ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್ ಕಾರಣ ಎಂದು ಕೆಟ್ಟ ಪೋಸ್ಟ್

Sampriya
ಶುಕ್ರವಾರ, 5 ಏಪ್ರಿಲ್ 2024 (16:32 IST)
Photo Courtesy X
ಬೆಂಗಳೂರು: ಸತತ ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್ ರಾಜಕುಮಾರ್‌ ಅವರೇ ಕಾರಣ ಎಂದು ದೋಷಿಸಿ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲಾಗಿದೆ.

ಇದೀಗ ದೊಡ್ಮನೆ ಸೊಸೆ, ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್  ಮಾಡಿದ ಕಿಡಿಗೇಡಿಗಳ ವಿರುದ್ಧ ದೂರನ್ನು ನೀಡಲು ನಿರ್ಧರಿಸಲಾಗಿದೆ.

ಐಪಿಎಲ್‌ ಈ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರುವುದಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕಾಲ್ಗುಣ ಕಾರಣ ಎಂದು ದೋಷಿಸಿ ಅವರ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಹೌದು, ಇತ್ತೀಚೆಗಷ್ಟೇ ಐಪಿಎಲ್‌ ಶುರುವಾಗಿದೆ. ಅದಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬ್ಯಾಂಗಲೋರ್‌ ಇದ್ದ ಹೆಸರನ್ನು ಬದಲಾವಣೆ ಮಾಡಲು, ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ ಆಯೋಜನೆ ಮಾಡಿತ್ತು. ಆ ಕಾರ್ಯಕ್ರಮದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎಂದು ಹೆಸರನ್ನು ಬದಲಿಸಲಾಗಿತ್ತು.

ಇನ್ನೂ ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಲಾಗಿತ್ತು.  ಅಶ್ವಿನಿ ಅವರು ಬಂದಿದ್ದಕ್ಕೇ ಆರ್‌ಸಿಬಿ ಮ್ಯಾಚ್‌ ಸೋಲುತ್ತಿದೆ ಎಂಬ ಪೋಸ್ಟ್‌ ಇದೀಗ ವೈರಲ್‌ ಆಗಿದೆ.

ಅಷ್ಟಕ್ಕೂ ಆ ಪೋಸ್ಟ್‌ನಲ್ಲೇನಿದೆ?

@GAJAPADE6 ಹೆಸರಿನ ಟ್ವಿಟರ್‌ ಖಾತೆಯಿಂದ, "ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಗಂಡ ಸತ್ತ ಮುಂ.. ಯರನ್ನು ಕರೀಬಾರದು. ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ಗೆ ಈ ಮುಂ...ಯನ್ನು ಕರೆದಿದ್ದಕ್ಕೆ ಎಲ್ಲ ಮ್ಯಾಚ್‌ ಸೋಲ್ತಾ ಇದ್ದಾರೆ" ಎಂದು #Yuvarajkumar #PuneethRajkumar #Yuva #Dboss #DevilTheHero ಎಂಬ ಹ್ಯಾಷ್‌ಟ್ಯಾಗ್‌ ಹಾಕಿ ಪೋಸ್ಟ್‌ ಮಾಡಿದ್ದಾರೆ.
X ಖಾತೆಯೇ ಮಾಯ!

ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರೇ ಹೊಣೆ ಎಂದು ಟ್ವಿಟರ್‌ನಲ್ಲಿ ಈ ರೀತಿಯ ಪೋಸ್ಟ್‌ ಶೇರ್‌ ಮಾಡುತ್ತಿದ್ದಂತೆ, ಟೀಕೆಗೆ ಗುರಿಯಾಗಿದೆ.

ಪೋಸ್ಟ್ ವೈರಲ್ ಬೆನ್ನಲ್ಲೇ  ವ್ಯಾಪಕ ಟೀಕೆ ಬಂದಿದ್ದು, ಕೂಡಲಢ ಕೃತ್ಯ ಎಸಗಿದವರು ಕ್ಷಮೆ ಕೋರಬೇಕು. ಇನ್ನು ನಟ ದರ್ಶನ್ ಕೂಡಾ ತನ್ನ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕೆಂದು ಕೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂನಲ್ಲಿ ನ್ಯಾಯ ಸಿಗುವ ನಂಬಿಕೆಯಲ್ಲಿದ್ದೇನೆ: ನಟಿ ರಮ್ಯಾ

ಇದು ನನ್ನ ರಿಯಲ್ ಮುಖ: ಟ್ರೋಲ್‌ಗೆ ಬೇಸತ್ತು ಕೌಂಟರ್ ಕೊಟ್ಟ ಉರ್ಫಿ ಜಾವೇದ್‌

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನೋ ಟೆನ್ಷನ್ ಎಂದರಾ ವಿಜಯಲಕ್ಷ್ಮಿ ದರ್ಶನ್

ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌, ಪವಿತ್ರಾ ಗೌಡ ಸಂಬಂಧ ಬಗ್ಗೆ ವಕೀಲರು ಹೇಳಿದ್ದು ಹೀಗೆ

ನಿಮ್ಮಿಂದಲೇ ಆಗಿದ್ದು ಪವಿತ್ರಾ ಗೌಡ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ

ಮುಂದಿನ ಸುದ್ದಿ
Show comments