Publish Date: Fri, 06 Aug 2021 (09:20 IST)
Updated Date: Fri, 06 Aug 2021 (09:24 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಏಕ್ ಲವ್ ಯಾ ಸಿನಿಮಾದಲ್ಲಿ ಸಿಗರೇಟು ಕೈಯಲ್ಲಿ ಹಿಡಿದ ಫೋಟೋ ನೋಡಿ ಫ್ಯಾನ್ಸ್ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಇದೀಗ ಸಿಗರೇಟ್ ಹೊಡೆಯುವ ಸರದಿ ಆಶಿಕಾ ರಂಗನಾಥ್ ಅವರದ್ದು.
ಆಶಿಕಾ ಬರ್ತ್ ಡೇ ಅಂಗವಾಗಿ ಮದಗಜ ಸಿನಿಮಾ ತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಆಶಿಕಾ ದಮ್ ಹೊಡೆಯುವ ಫೋಟೋ ಇದೆ.
ಈ ಮೂಲಕ ಮದಗಜ ಸಿನಿಮಾದಲ್ಲಿ ಆಶಿಕಾ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಆಶಿಕಾ ರಗಡ್ ಲುಕ್ ಗೆ ಜನ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.