Publish Date: Fri, 27 Jan 2017 (10:09 IST)
Updated Date: Fri, 27 Jan 2017 (10:12 IST)
ತಮಿಳಿನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಕಳೆದ ಮೂರು ವರ್ಷಗಳಿಂದ ಯಾವುದೇ ಬಹುರಾಷ್ಟ್ರೀಯ ಕಂಪೆನಿಗಳ ಶೀತಲ ಪಾನೀಯ ಕುಡಿಯುವುದನ್ನು ಬಿಟ್ಟುಬಿಟ್ಟಿದ್ದಾರಂತೆ. ಈ ವಿಷಯವನ್ನು ಸ್ವತಃ ಅವರೇ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಮುರುಗಾಸ್ ನಿರ್ದೇಶನದಲ್ಲಿ ’ಕತ್ತಿ’ ಚಿತ್ರ ಬಂದಿದ್ದು ಗೊತ್ತೇ ಇದೆ. ಈ ಚಿತ್ರದಲ್ಲಿ ಶೀತಲ ಪಾನೀಯಗಳ ತಯಾರಿಯಿಂದ ಗ್ರಾಮಗಳಲ್ಲಿನ ನೀರಿನ ಸಂಪನ್ಮೂಲ ಕಲುಷಿತವಾಗುತ್ತಿರುವ ಬಗ್ಗೆ ಬೆಳಕು ಚೆಲ್ಲಿದ್ದರು. ಕೇವಲ ಕಮರ್ಷಿಯಲ್ ಹಿಟ್‌ಗಾಗಿ ಅಲ್ಲದೆ ಈ ಚಿತ್ರದ ಮೂಲಕ ಆಚರಣೆಗೂ ಮುಂದಾದರು. ಕಥೆ ಬರೆಯುವ ಸಂದರ್ಭದಲ್ಲೇ ಶೀತಲ ಪಾನೀಯ ಕುಡಿಯುವುದನ್ನು ಬಿಟ್ಟುಬಿಟ್ಟರಂತೆ.
ಮೂರು ವರ್ಷಗಳ ಹಿಂದೆ ಕತ್ತಿ ಸಿನಿಮಾ ಕಥೆ ಬರೆಯುತ್ತಿರಬೇಕಾದರೆ ಇದನ್ನು ಕುಡಿಯುವುದನ್ನು ಬಿಟ್ಟೆ. ಈಗ ನನ್ನ ಶೂಟಿಂಗ್ ಸ್ಪಾಟ್‌ನಲ್ಲೂ ನಿಷೇಧಿಸಿದ್ದೇನೆ ಎಂದು ಮುರುಗದಾಸ್ ತಿಳಿಸಿದ್ದಾರೆ. ಸದ್ಯಕ್ಕೆ ಮಹೇಶ್ ಬಾಬು ಅಭಿನಯಿಸುತ್ತಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಮುರುಗದಾಸ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.