Select Your Language

Notifications

webdunia
webdunia
webdunia
webdunia

ನಾನು ಇನ್ಮುಂದೆ ಆಂಕರಿಂಗ್ ಮಾಡಲ್ಲ: ದಿಡೀರ್ ಈ ನಿರ್ಧಾರ ಮಾಡಿದ್ದೇಕೆ ಅನುಪಮಾ ಗೌಡ

Anupama Gowda
ಬೆಂಗಳೂರು: ನಟಿ ಕಮ್ ಆಂಕರ್ ಅನುಪಮಾ ಗೌಡ ದಿಡೀರ್ ನಿರೂಪಣೆ ವೃತ್ತಿಗೆ ಗುಡ್ ಬೈ ಹೇಳಿದ್ದು, ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ತಂದಿದ್ದಾರೆ. ತಮ್ಮ ನಿರ್ಧಾರಕ್ಕೆ ಕಾರಣವೇನೆಂದು ಅನುಪಮಾ ಹೇಳಿದ್ದಾರೆ.

ಅನುಪಮಾ ಗೌಡ ಯೂ ಟ್ಯೂಬ್ ಚಾನೆಲ್ ಆರಂಭಿಸಿದ್ದು ಇದರಲ್ಲಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಪ್ರೀತಿಯ ವಿದಾಯ ಎನ್ನುವ ಹೆಸರಿನಲ್ಲಿ ಅನುಪಮಾ ವಿಡಿಯೋ ಹಂಚಿಕೊಂಡಿದ್ದು ಇನ್ನು ಮುಂದೆ ತಾನು ಆಂಕರಿಂಗ್ ಮಾಡಲ್ಲ ಎಂದಿದ್ದಾರೆ.

ಏನೂ ಗೊತ್ತಿಲ್ಲದ ನನಗೆ ಕನ್ನಡ ಕಲಿಸಿ, ವೇದಿಕೆ ಹತ್ತಲು ಸಹಾಯ ಮಾಡಿದವರು ಅನೇಕರು. ನನ್ನ ಆಂಕರಿಂಗ್ ವೃತ್ತಿಯಲ್ಲಿ ಹಲವರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಅವರೆಲ್ಲರನ್ನೂ ನಾನು ಜೀವನುದ್ದಕ್ಕೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ.

ಎಲ್ಲರಿಗೂ ಥ್ಯಾಂಕ್ಯೂ. ನನ್ನ ಮುಂದೆ ಬೇರೆ ದಾರಿಗಳಿವೆ. ಈಗ ವಿದಾಯ ಹೇಳುವ ಸಮಯ ಬಂದಿದೆ. ನಿಮ್ಮ ಪ್ರೀತಿಗೆ ನಾನು ಅಭಾರಿ. ನನ್ನೊಳಗಿನ ಕಲಾವಿದೆಯನ್ನು ತೃಪ್ತಿಗೊಳಿಸಬೇಕು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಮರ್ಡರ್ ಕೇಸ್: ನಟ ದರ್ಶನ್ ಗೆ ಇಂದು ಮಹತ್ವದ ದಿನ