Webdunia - Bharat's app for daily news and videos

Install App

ಜನಪ್ರಿಯ ಶೋಗೆ ಕಮ್ ಬ್ಯಾಕ್ ಮಾಡಿದ ಅನುಪಮಾ ಗೌಡ

Krishnaveni K
ಗುರುವಾರ, 16 ಮೇ 2024 (11:12 IST)
Photo Courtesy: Instagram
ಬೆಂಗಳೂರು: ಕಿರುತೆರೆ ನಟಿ, ನಿರೂಪಕಿ ಅನುಪಮಾ ಗೌಡ ಮತ್ತೆ ಕಲರ್ಸ್ ವಾಹಿನಿಯ ಜನಪ್ರಿಯ ಶೋಗೆ ಕಮ್ ಬ್ಯಾಕ್ ಮಾಡಿದ್ದಾರೆ. ಕಲರ್ಸ್ ವಾಹಿನಿ ಈ ಬಗ್ಗೆ ಪ್ರೋಮೋ ಒಂದನ್ನು ಹರಿಯಬಿಟ್ಟಿದೆ.

ಸೃಜನ್ ಲೋಕೇಶ್ ನಡೆಸಿಕೊಡುವ ಶೋಗಳಲ್ಲಿ ರಾಜಾ ರಾಣಿ ರಿಯಾಲಿಟಿ ಶೋ ಕೂಡಾ ಒಂದು. ಈ ಶೋ ಈಗಾಗಲೇ ಯಶಸ್ವಿಯಾಗಿ ಎರಡು ಸೀಸನ್ ಗಳನ್ನು ಮುಗಿಸಿದೆ. ಇದೀಗ ಮೂರನೇ ಸೀಸನ್ ಆರಂಭವಾಗುತ್ತಿರುವ ಸಿಹಿ ಸುದ್ದಿಯನ್ನು ವಾಹಿನಿ ನೀಡಿದೆ.

ಇದರ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಈ ಪ್ರೋಮೋದಲ್ಲಿ ಅನುಪಮಾ ಗೌಡರನ್ನು ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ಸತತವಾಗಿ ಸೃಜನ್ ಲೋಕೇಶ್ ನಿರ್ಮಾಣದ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿದ್ದ ಅನುಪಮಾ ಇದರ ಮಧ‍್ಯೆ ಕೆಲವು ಅಭಿಪ್ರಾಯ ವ್ಯತ್ಯಾಸಗಳಿಂದ ದೂರವಾಗಿದ್ದರು. ಈ ಬಗ್ಗೆ ಲೈವ್ ಬಂದಾಗ ನನ್ನನ್ನು ನಿರೂಪಕಿಯಾಗಿ ಕರೆದಿಲ್ಲ. ಹೀಗಾಗಿ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.

ಇದೀಗ ಅನುಪಮಾ ಕಮ್ ಬ್ಯಾಕ್ ಮಾಡಿದ್ದಾರೆ. ಸೃಜನ್ ಲೋಕೇಶ್, ತಾರಾ ಅನುರಾಧ ತೀರ್ಪುಗಾರರಾಗಿರುವ ಶೋಗೆ ಅನುಪಮಾ ಗೌಡ ಆಂಕರ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಸುದ್ದಿ ತಿಳಿದ ವೀಕ್ಷಕರು ಏನೇ ಆಗಲಿ, ಅನುಪಮಾ ವಾಪಸ್ ಬಂದ್ರಲ್ಲಾ ನಮಗೆ ಅಷ್ಟೇ ಖುಷಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಒಂದು ಮಾತು ಎಲ್ಲವನ್ನೂ ನಿಭಾಯಿಸಬಹುದಿತ್ತು: ನಟಿ ರಮ್ಯಾ

ತುಳು ಸಿನಿಮಾಗೆ ಎಂಟ್ರಿ ಕೊಟ್ಟ ಬ್ಯಾಂಗಲ್ ಬಂಗಾರಿ ಖ್ಯಾತಿಯ ಆಂಟೋನಿ, ರೂಪೇಶ್ ಶೆಟ್ಟಿ ಸಿನಿಮಾಗೆ ಗಾಯನ

ಡಿ ಫ್ಯಾನ್ಸ್ ಅಶ್ಲೀಲ ಮೆಸೇಜ್‌: ಅಭಿಮಾನಿಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ನಟಿ ರಮ್ಯಾ ದೂರು

₹72 ಕೋಟಿ ಆಸ್ತಿಯನ್ನು ಸಂಜಯ್‌ ದತ್‌ಗೆ ಬಿಟ್ಟು ಹೋದ ಮಹಿಳಾ ಅಭಿಮಾನಿ, ನಟ ಅದನ್ನೇನು ಮಾಡಿದ್ರೂ ಗೊತ್ತಾ

ಡಿ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ಸ್‌: ರಮ್ಯಾ ದೂರು ಕೊಟ್ಟರೆ ಕಾನೂನು ಕ್ರಮ ಎಂದ ಪರಮೇಶ್ವರ್‌

ಮುಂದಿನ ಸುದ್ದಿ
Show comments