ನಟ ದರ್ಶನ್ ಗೆ ಇಂದು ಮತ್ತೊಂದು ಮಹತ್ವದ ದಿನ

Krishnaveni K
ಸೋಮವಾರ, 22 ಜುಲೈ 2024 (09:18 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಇಂದು ಮತ್ತೊಂದು ಮಹತ್ವದ ದಿನವಾಗಿದೆ. ದರ್ಶನ್ ಪ್ರಕರಣದಲ್ಲಿ ಇಂದು ಕೋರ್ಟ್ ಮತ್ತೊಂದು ಮಹತ್ವದ ತೀರ್ಮಾನ ಪ್ರಕಟಿಸಲಿದೆ.

ಕಳೆದ ಒಂದು ತಿಂಗಳಿನಿಂದ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನೂ ಆಗಸ್ಟ್ 1 ರವರಗೆ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ. ಆದರೆ ಐಷಾರಾಮಿ ಜೀವನಕ್ಕೆ ಒಗ್ಗಿ ಹೋಗಿದ್ದ ದರ್ಶನ್ ಗೆ ಜೈಲೂಟ ಸರಿ ಬರುತ್ತಿರಲಿಲ್ಲ.

ತಮಗೆ ಅಜೀರ್ಣವಾಗುತ್ತಿದೆ, ಜೈಲೂಟ ಒಗ್ಗುತ್ತಿಲ್ಲ, ಮನೆ ಊಟ ಕೊಡಲು ಅವಕಾಶ ಕೊಡಿ ಎಂದು ವಕೀಲರ ಮೂಲಕ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ವಿಚಾರವಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಅದರಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

ಇಂದು ಕೋರ್ಟ್ ದರ್ಶನ್ ಗೆ ಮನೆ ಆಹಾರ ನೀಡಬಹುದೇ ಎಂಬ ವಿಚಾರವಾಗಿ ಮಹತ್ವದ ತೀರ್ಪು ಪ್ರಕಟಿಸಲಿದೆ. ಇದಕ್ಕೆ ಮೊದಲು ಹೈಕೋರ್ಟ್ ಒಂದು ವಾರದೊಳಗಾಗಿ ಈ ವಿಚಾರವಾಗಿ ತೀರ್ಪು ಪ್ರಕಟಿಸಲು ಸೂಚಿಸಿತ್ತು. ಅದರಂತೆ ಇಂದು ಮನೆ ಊಟವೇ, ಜೈಲೂಟವೇ ಮುಂದುವರಿಯುತ್ತಾ ಎನ್ನುವುದು ಸ್ಪಷ್ಟವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರದಲ್ಲಿ ಸೌಂದರ್ಯದ ಗಣಿ, ಟಾಕ್ಸಿಕ್ ನಲ್ಲಿ ರುಕ್ಮಿಣಿ ವಸಂತ್ ತೊಡೆ ದರ್ಶನ

ಜೈಲಿನಲ್ಲಿರುವ ಪವಿತ್ರಾ ಗೌಡಗೆ ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ ಎನ್ನುವ ಪರಿಸ್ಥಿತಿ

40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದೀಪಿಕಾ ಪಡುಕೋಣೆ ಮುಂದಿನ ಸಿನಿಮಾವೇನು ಗೊತ್ತಾ

ತಿಥಿ ಸಿನಿಮಾ ಖ್ಯಾತಿಯ ಶತಾಯುಷಿ ಸೆಂಚುರಿ ಗೌಡ ಇನ್ನು ನೆನಪು ಮಾತ್ರ

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ: ಎರಡು ಗುಡ್ ನ್ಯೂಸ್ ನಿರೀಕ್ಷೆಯಲ್ಲಿ ಫ್ಯಾನ್ಸ್

ಮುಂದಿನ ಸುದ್ದಿ
Show comments