Webdunia - Bharat's app for daily news and videos

Install App

ಕಿರುತೆರೆ ನಟಿ ಅಂಕಿತಾ ಅಮರ್, ಬಿಗ್ ಬಾಸ್ ಶೈನ್ ಶೆಟ್ಟಿ ‘ಜಸ್ಟ್ ಮ್ಯಾರೀಡ್’

Krishnaveni K
ಸೋಮವಾರ, 22 ಏಪ್ರಿಲ್ 2024 (09:30 IST)
Photo Courtesy: Instagram
ಬೆಂಗಳೂರು: ಕಿರುತೆರೆ ನಟಿ ಅಂಕಿತಾ ಅಮರ್ ಮತ್ತು  ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಮದುವೆ ದಿರಿಸಿನಲ್ಲಿದ್ದು ‘ಜಸ್ಟ್ ಮ್ಯಾರೀಡ್’ ಎಂದು ಬೋರ್ಡ್ ಹಾಕಿಕೊಂಡಿದ್ದಾರೆ.

ಇವರಿಬ್ಬರ ಮದುವೆ ಫೋಟೋ ನೋಡಿ ನಿಜ ಜೀವನದಲ್ಲೂ ಮದುವೆಯಾದರೇನೋ ಎಂದುಕೊಳ್ಳಬೇಡಿ. ಇಬ್ಬರೂ ಮದುವೆಯಾಗಿರುವುದು ಪರದೆ ಮೇಲೆ. ಶೈನ್ ಶೆಟ್ಟಿ-ಅಂಕಿತಾ ಅಮರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ಜಸ್ಟ್ ಮ್ಯಾರೀಡ್.

ಈ ಸಿನಿಮಾದ ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ.  ಸುಮಾರು 45 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಬೆಂಗಳೂರು, ಮೈಸೂರು ಆಸುಪಾಸಿನಲ್ಲೇ ಚಿತ್ರೀಕರಣ ನಡೆದಿದೆ. ಇದೀಗ ಚಿತ್ರೀಕರಣ ಮುಗಿಸಿಕೊಂಡು ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಮುಖ ಮಾಡಿದೆ.

ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ಶೈನ್-ಅಂಕಿತಾ ಜೊತೆಗೆ ಶ್ರುತಿ ಹರಿಹರನ್, ಮಾಳವಿಕಾ ಅವಿನಾಶ್, ರವಿಶಂಕರ್ ಗೌಡ, ದೇವರಾಜ್, ಅಚ್ಯುತ್ ಕುಮಾರ್ ಸೇರಿದಂತೆ ಪ್ರತಿಭಾವಂತ ನಟರ ದಂಡೇ ಇದೆ. ಹೆಸರೇ ಹೇಳುವಂತೆ ಇದೊಂದು ಲವ್ ಸ್ಟೋರಿಯಾಗಿದ್ದು, ಚಿತ್ರದಲ್ಲಿ 6 ಹಾಡುಗಳಿವೆ. ಇದಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಒಂದು ಹಾಡು ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಚಿತ್ರಕ್ಕೆ ಸಿ.ಆರ್. ಬಾಬಿ ಆಕ್ಷನ್ ಕಟ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಮರ್ಡರ್ ಕೇಸ್: ನಟ ದರ್ಶನ್ ಗೆ ಇಂದು ಮಹತ್ವದ ದಿನ

ನಟರು ದೇವಲೋಕದಿಂದ ಇಳಿದು ಬಂದವರಾ… ಏರ್ ಪೋರ್ಟ್ ನಲ್ಲಿ ಅಲ್ಲು ಅರ್ಜುನ್ ವರ್ತನೆಗೆ ಟೀಕೆ Video

ಕೇರಳಕ್ಕೆ ಮರಳುವ ದಾರಿ ತಪ್ಪಿದ್ದ ಮಮ್ಮುಟ್ಟಿ: ಸಹಾಯಕ್ಕೆ ಬಂದ ಸ್ಥಳೀಯನಿಗೆ ಮಾಡಿದ್ದೇನು ನೋಡಿ Video

ನಿಷೇಧಿತ ಉತ್ಪನ್ನಗಳಿಗೆ ಪ್ರಚಾರ: ಬಾಲಿವುಡ್‌ ಸ್ಟಾರ್‌ ಶಾರುಖ್, ದೇವಗನ್, ಟೈಗರ್ ಶ್ರಾಫ್‌ಗೆ ಪೋಕಾಸ್‌ ನೋಟಿಸ್

ಶೂಟಿಂಗ್ ಸ್ಥಳಕ್ಕೆ ಹೋಗುವಾಗ ದಾರಿ ತೋರಿಸಿದ ವ್ಯಕ್ತಿ, ಖ್ಯಾತ ನಟ ಮಮ್ಮೂಟ್ಟಿ ಆ ವ್ಯಕ್ತಿ ಜತೆ ನಡೆದುಕೊಂಡ ರೀತಿ ನೋಡಿದ್ರೆ ಶಾಕ್

ಮುಂದಿನ ಸುದ್ದಿ
Show comments