ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ನಿರ್ಮಾಣ ವಿಚಾರವಾಗಿ ಹಲವು ಗೊಂದಲಗಳಿರುವ ಬಗ್ಗೆ ನಟ, ಅಳಿಯ ಅನಿರುದ್ಧ್ ಸ್ಪಷ್ಟನೆ ನೀಡಿದ್ದಾರೆ.
ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಇರುವ ಅಡೆತಡೆಗಳ ಬಗ್ಗೆ ಹಲವು ಗೊಂದಲಗಳು, ಇಲ್ಲಸಲ್ಲದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಅನಿರುದ್ಧ್ ಸ್ಪಷ್ಟನೆ ನೀಡಿದ್ದಾರೆ.
ಸ್ಮಾರಕದ ವಿಚಾರವಾಗಿ ಸಂಪೂರ್ಣ ಮಾಹಿತಿಯಿಲ್ಲದೇ ದಯವಿಟ್ಟು ಯಾರೂ ಕಾಮೆಂಟ್ ಮಾಡಬೇಡಿ ಎಂದು ಕೈ ಮುಗಿದು ಕೇಳುತ್ತೇನೆ. 30 ನೇ ಡಿಸೆಂಬರ್ ಬೆಳಿಗ್ಗೆ 11 ಗಂಟೆಗೆ ಸ್ಮಾರಕದ ಜಾಗದಲ್ಲಿ ನನ್ನನ್ನು ನೇರವಾಗಿ ಭೇಟಿ ಮಾಡಿ, ವಿವರಿಸುವೆ. ನಮ್ಮ ಪ್ರೀತಿ, ಶ್ರದ್ಧೆ, ಅಭಿಮಾನ, ಪ್ರಯತ್ನಗಳು, ಶ್ರಮದ ಬಗ್ಗೆ ಸಂಶಯ ಬೇಡ ಎಂದು ಅನಿರುದ್ಧ್ ಮನವಿ ಮಾಡಿದ್ದಾರೆ.