ಸಿಟ್ಟಿಗೆದ್ದ ಸಂಬರಗಿ..!

ಪ್ರಶಾಂತ್ ತಾಕತ್ತಿನ ಬಗ್ಗೆ ಪ್ರಶ್ನಿಸಿದ ಅರವಿಂದ್

Webdunia
ಶುಕ್ರವಾರ, 9 ಜುಲೈ 2021 (18:21 IST)
Bigg Boss 8 Kannada: ದಿವ್ಯಾ ಉರುಡುಗ ಟಾಸ್ಕ್ ವಿಷಯದಲ್ಲಿ ಮಾಡಿದ್ದು ತಪ್ಪು ಹಾಗೂ ಮೋಸ ಎಂದು ಪ್ರಶಾಂತ್ ಮಾತು ಆರಂಭಿಸುತ್ತಾರೆ. ಅಲ್ಲಿಂದ ಜಗಳ ಮಾತುಕತೆ ಆರಂಭವಾಗುತ್ತದೆ. ಪ್ರಶಾಂತ್ ಮಾತಿನಿಂದ ಸಿಟ್ಟಿಗೆದ್ದ ಅರವಿಂದ್ ತಾಕತ್ತಿನ ವಿಷಯ ತೆಗೆಯುತ್ತಾರೆ.



















ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯಲ್ಲಿ ಕುಚಿಕು ಗೆಳೆಯ ಚಕ್ರವರ್ತಿ ಸೇರಿದಂತೆ ತುಂಬಾ ಜನರ ಜೊತೆ ಜಗಳ ಆಡೋದು ಸಾಮಾನ್ಯವಾಗಿ ಹೋಗಿದೆ. ಈ ಹಿಂದೆ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರೊಂದಿಗೆ ಜಗಳ ಆಡುವುದರೊಂದಿಗೆ ಪ್ರಶಾಂತ್ ಸಂಬರಗಿ ಚುಚ್ಚು ಮಾತುಗಳನ್ನಾಡುವ ಮೂಲಕ ಮನಸ್ಸಿಗೆ ನೋವು ಮಾಡಿದ್ದರು. ಪ್ರಶಾಂತ್ ಅವರ ಚುಚ್ಚು ಮಾತುಗಳಿಂದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಕಣ್ಣೀರಿಟ್ಟಿದ್ದರು. ಇದೇ ವಿಷಯ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆಗೆ ಬಂದಿತ್ತು. ಆಗ ಸುದೀಪ್ ಅವರು ಪ್ರಶಾಂತ್ ಸಂಬರಗಿ ಅವರಿಗೆ ಈ ವಿಷಯವಾಗಿಯೇ ಮಾತಿನ ಚಾಟಿ ಬೀಸಿದ್ದರು. ಆಗಿನಿಂದ ಪ್ರಶಾಂತ್ ಮನೆಯಲ್ಲಿ ಚುಚ್ಚು ಮಾತುಗಳನ್ನು ಆಡುವುದನ್ನು ಕೊಂಚ ಕಡಿಮೆ ಮಾಡಿದ್ದರು. ಆದರೆ ಚುಚ್ಚು ಮಾತು ನಿಲ್ಲಿಸಿದರೂ ಜಗಳ ಮಾತ್ರ ಕಡಿಮೆಯಾಗಿಲ್ಲ.
ಹೌದು, ಅರವಿಂದ್ ಹಾಗೂ ದಿವ್ಯಾ ಉರುಡುಗ ಜತೆ ಮೊದಲಿನಿಂದಲೂ ಚೆನ್ನಾಗಿಯೇ ಇರುವ ಪ್ರಶಾಂತ್ ಸಂಬರಗಿ ಅವರಿಗೆ ಅರವಿಂದ್ ಅವರು ಟಾಸ್ಕ್ ವಿಷಯದಲ್ಲಿ ನಡೆದುಕೊಂಡ ರೀತಿ ಸರಿಯಾಗಿಲ್ಲ ಅನ್ನೋ ಭಾವನೆ ಮೂಡಿದೆ. ಇನ್ನು ಕ್ಯಾಪ್ಟನ್ ದಿವ್ಯಾ ಉರುಡುಗ ಸಹ ಆಟದಲ್ಲಿ ಮೋಸ ಮಾಡಿದ್ದಾರಂತೆ. ಈ ವಿಷಯವಾಗಿಯೇ ನಿನ್ನೆ ಪ್ರಶಾಂತ್ ಅವರು ದಿವ್ಯಾ ಉರುಡುಗ ಅವರ ಬಳಿ ಚರ್ಚಿಸಿ, ಕೊಂಚ ಮಾತಿನ ಚಕಮಕಿ ನಡೆಯಿತು.
ಇದರ ಮುಂದುವರೆದ ಭಾಗವಾಗಿಯೇ ಇಂದು ಮತ್ತೆ ಮನೆಯಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಅರವಿಂದ್ ಕೆ ಪಿ ಅವರ ನಡುವೆ ಜೋರಾಗಿ ಮಾತುಕತೆ ನಡೆದಿದೆ. ಸದ್ಯಕ್ಕೆ ರಿಲೀಸ್ ಆಗಿರುವ ಪ್ರೋಮೋದಲ್ಲಿ ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬರಗಿ ಅಡುಗೆ ಮನೆಯ ಎದುರು ಇರುವ ಮೆಟ್ಟಿಲುಗಳ ಮೇಲೆ ಕುಳಿತಿರುತ್ತಾರೆ. ಆಗ ಬಿಗ್ ಬಾಸ್ ವಾಯ್ಸ್ ಕೇಳಿಸುತ್ತದೆ. ದಿವ್ಯಾ ಉರುಡುಗ ಅವರ ಕ್ಯಾಪ್ಟನ್ಸಿ ಇಂದಿಗೆ ಮುಕ್ತಾಯವಾಗಿದೆ ಎನ್ನುತ್ತಾರೆ.
ಈ ಪ್ರಕಟಣೆಯ ನಂತರ ದಿವ್ಯಾ ಉರುಡುಗ ಟಾಸ್ಕ್ ವಿಷಯದಲ್ಲಿ ಮಾಡಿದ್ದು ತಪ್ಪು ಹಾಗೂ ಮೋಸ ಎಂದು ಪ್ರಶಾಂತ್ ಮಾತು ಆರಂಭಿಸುತ್ತಾರೆ. ಅಲ್ಲಿಂದ ಜಗಳ ಮಾತುಕತೆ ಆರಂಭವಾಗುತ್ತದೆ.

ಪ್ರಶಾಂತ್ ಸಂಬರಗಿ ಮಾತಿಗೆ ಅರವಿಂದ್ ಅದು ಸುಳ್ಳು ಎನ್ನತ್ತಾರೆ. ಆಗ ಕೂಗಾಡುತ್ತಾ ಪ್ರಶಾಂತ್, ನಾನು ಮೋಸ ಮಾಡಿದ ಬಗ್ಗೆ ಮಾತನಾಡಿದರೆ ಇವನಿಗೆ (ಅರವಿಂದ್) ಏಕೆ ಉರಿಯಬೇಕು ಎನ್ನುತ್ತಾರೆ. ಇವರಿಬ್ಬರ ಮಾತುಕತೆ ತಾರಕಕ್ಕೇರಿ, ಅರವಿಂದ್ ಪ್ರಶಾಂತ್ ಅವರ ತಾಕತ್ತಿನ ಬಗ್ಗೆ ಪ್ರಶ್ನಿಸುತ್ತಾರೆ. ತಾಕತ್ತು ಇದ್ದರೆ ಟಾಸ್ಕ್ನಲ್ಲಿ ತೋರಿಸಿ ಎನ್ನುತ್ತಾರೆ. ಆಗ ಪ್ರಶಾಂತ್ ನಿನ್ನ ತಾಕತ್ತು ನಾನು ನೋಡಿದ್ದೇನೆ ಎಂದು ಖಾರವಾಗಿಯೇ ಪ್ರತಿಕ್ರಿಯಿಸುತ್ತಾರೆ. ಈ ಹಿಂದೆ ಅರವಿಂದ್ ಹಾಗೂ ರಘು ಟಾಸ್ಕ್ ವಿಚಾರದ ಬಗ್ಗೆ ಪ್ರಶಾಂತ್ ಮಾತನಾಡಿದ್ದರು. ಆಗ ಅರವಿಂದ್, ಪ್ರಶಾಂತ್ ಅವರು ಸಮಾಜ ಸೇವಕ ಎಂದು ತೋರಿಸಿಕೊಳ್ಳುತ್ತಿದ್ದಾರೆ ಅಂತ ವ್ಯಂಗ ಮಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೊದಲ ಸಿನಿಮಾದಲ್ಲಿ ಟ್ರೋಲ್ ಆಗಿದ್ದ ವಿನಯ್ ರಾಜ್ ಕುಮಾರ್: ಗ್ರಾಮಾಯಣ ಸಿನಿಮಾ ನೋಡಿದ ಪ್ರೇಕ್ಷಕರು ಏನಂದ್ರು ಗೊತ್ತಾ

ಮೇಡಂ ಥೇಟ್ ರಾಜ ರಾಜೇಶ್ವರಿ ದೇವಿ ಥರಾನೇ ಕಾಣಿಸ್ತಿದ್ದೀರಾ.. ಎಂದಾಗ ರಚಿತಾ ರಾಮ್ ರಿಯಾಕ್ಷನ್ ಏನಿತ್ತು ನೋಡಿ Video

ರೇಣುಕಾಸ್ವಾಮಿ ಮರ್ಡರ್ ಕೇಸ್ ಗೆ ಟ್ವಿಸ್ಟ್: ನಟ ದರ್ಶನ್ ಗೆ ಎದುರಾಗಿದೆ ಮತ್ತೊಂದು ಸಂಕಷ್ಟ

ಗೌರಿ ಜತೆ ಮೂರನೇ ಮದುವೆಗೆ ರೆಡಿಯಾದ ಅಮೀರ್ ಖಾನ್‌ಗೆ ಮಕ್ಕಳೇ ಎಲ್ಲವನ್ನೂ ಪ್ಲಾನ್‌ ಮಾಡುತ್ತಿರುವುದಂತೆ

Video ಛತ್ರಿ ಹಿಡಿಯೋದೇನು ಬೇಕಿಲ್ಲ.. ನಟ ಕಾಜಲ್ ಅಗರ್ವಾಲ್ ವರ್ತನೆಗೆ ನೆಟ್ಟಿಗರು ಫಿದಾ

ಮುಂದಿನ ಸುದ್ದಿ
Show comments