ಬೆಂಗಳೂರು: ಕನ್ನಡದ ಬಿಗ್ ಬಾಸ್‌ನ ಏಳನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಖ್ಯಾತ ನಿರೂಪಕಿ ಹಸೆಮಣೆಯೇರಿದ್ದಾರೆ. ಉದ್ಯಮಿ ಜಗದೀಪ್ ಜೊತೆ ಅವರು ತಮ್ಮ ಎರಡನೇ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಂಡಿದ್ದಾರೆ.
ಅರಳು ಹುರಿದಂತೆ ಮಾತನಾಡುವ ಚೈತ್ರಾ ನಿರೂಪಕಿಯಷ್ಟೇ ಅಲ್ಲ. ಉದ್ಯಮಿ ಕೂಡ ಹೌದು. ಅವರದ್ದೇ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಇದೆ.
ಈ ಹಿಂದೆ ಸತ್ಯ ನಾಯ್ಡು ಎಂಬುವರ ಜೊತೆ ಚೈತ್ರಾ ಮದುವೆಯಾಗಿತ್ತು. ಮನಸ್ತಾಪಗಳಿಂದ 2023ರಲ್ಲಿ ಅವರಿಬ್ಬರೂ ದೂರವಾಗಿದ್ದರು. ಜಗದೀಪ್ ಅವರ ಪ್ರೇಮ ನಿವೇದನೆಗೆ ಸಮ್ಮತಿಸಿ ಗುರುಹಿರಿಯರ ಒಪ್ಪಿಗೆಯ ಮೇರೆಗೆ ಈ ಮದುವೆ ನಡೆದಿದೆ.
ಚೈತ್ರಾ ಅವರು ತಮ್ಮ ಮೆಹಂದಿ ಶಾಸ್ತ್ರದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಭಾವಿ ಪತಿಯ ಜೊತೆ ಸಖತ್ ಫೋಸ್ ಕೂಡ ನೀಡಿದ್ದಾರೆ. ಚೈತ್ರಾ ಅವರ ಈ ಮದರಂಗಿ ಶಾಸ್ತ್ರದಲ್ಲಿ ಇಡೀ ಕುಟುಂಬ ಭಾಗಿಯಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಚೈತ್ರಾ ವಾಸುದೇವನ್ ಮದುವೆ ಜರುಗಿದೆ. ಈ ಮದುವೆಗೆ ರಾಬರ್ಟ್ ನಿರ್ಮಾಪಕ ಉಮಾಪತಿ ಸೇರಿದಂತೆ ಅನೇಕರು ಭಾಗಿಯಾಗಿ ಈ ಜೋಡಿಗೆ ಶುಭಕೋರಿದ್ದಾರೆ.