Publish Date: Fri, 25 Sep 2020 (09:00 IST)
Updated Date: Fri, 25 Sep 2020 (09:01 IST)
ಬೆಂಗಳೂರು: ಡ್ರಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ ಬೆನ್ನಲ್ಲೇ ಮಾಧ‍್ಯಮಗಳು ತಮ್ಮನ್ನು ಅಪರಾಧಿ ಎಂಬಂತೆ ಬಿಂಬಿಸುತ್ತಿರುವುದಕ್ಕೆ ಆಂಕರ್ ಅನುಶ್ರೀ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ತಮ್ಮ ಹಳೆಯ ಸಿನಿಮಾ ತುಣುಕುಗಳನ್ನು ಹಾಕಿ ತಾನೊಬ್ಬ ಡ್ರಗ್ ಅಡಿಕ್ಟ್ ಎನ್ನುವ ರೀತಿಯಲ್ಲಿ ಕೆಲವು ಮಾಧ‍್ಯಮಗಳು ನನ್ನನ್ನು ಬಿಂಬಿಸುತ್ತಿವೆ. ಇದರಿಂದ ಈಗಾಗಲೇ ನನ್ನ ಕುಟುಂಬದವರಿಗೆ ನೋವಾಗಿದೆ. ನನ್ನನ್ನು ವಿಚಾರಣೆಗೆ ಕರೆದಿದ್ದಾರಷ್ಟೇ. ಆದರೆ ವಿಚಾರಣೆಗೆ ಮೊದಲೇ ಅಪರಾಧಿ ಎಂಬಂತೆ ಬಿಂಬಿಸಬೇಡಿ. ನಾನು ಬೆಳಿಗ್ಗೆ 11 ಗಂಟೆಗೆ ಮಂಗಳೂರು ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ. ಇದರ ಬಗ್ಗೆ ತರಾತುರಿಯಲ್ಲಿ ಸುದ್ದಿ ಪ್ರಕಟಿಸಿ ನೋವುಂಟು ಮಾಡಬೇಡಿ ಎಂದು ಅನುಶ್ರೀ ಮನವಿ ಮಾಡಿದ್ದಾರೆ.