Select Your Language

Notifications

webdunia
webdunia
webdunia
webdunia

‘ಐಪಿಎಸ್ ರೂಪಾ’ ಚಿತ್ರದಲ್ಲಿ ರೂಪಾ ಪಾತ್ರ ಯಾರು ಮಾಡ್ತಾರೆ ಗೊತ್ತಾ…?

‘ಐಪಿಎಸ್ ರೂಪಾ’ ಚಿತ್ರದಲ್ಲಿ ರೂಪಾ ಪಾತ್ರ ಯಾರು ಮಾಡ್ತಾರೆ ಗೊತ್ತಾ…?
ಬೆಂಗಳೂರು , ಸೋಮವಾರ, 28 ಆಗಸ್ಟ್ 2017 (14:08 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳನ್ನ ಬಯಲಿಗೆಳೆದಿದ್ದ ದಿಟ್ಟ ಐಪಿಎಸ್ ಅಧಿಕಾರಿ ರೂಪಾ ಕುರಿತ ಚಿತ್ರ ‘ಐಪಿಎಸ್ ರೂಪಾ’ ನಿರ್ಮಾಣವಾಗಲಿದೆ ಎನ್ನುವ ವಿಷಯ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡಿತ್ತು. ಇದೀಗ ನಿರ್ದೇಶಕ ಎ.ಎಂ.ಆರ್ ರಮೇಶ್, ಡಿಐಜಿ ರೂಪಾರನ್ನು ಭೇಟಿಯಾಗಿ ಈ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.



ಐಪಿಎಸ್ ಅಧಿಕಾರಿ ರೂಪಾರನ್ನ ಭೇಟಿಯಾಗಿದ್ದ ನಿರ್ದೇಶಕ ರಮೇಶ್, ಅವರ ವೈಯಕ್ತಿಕ ಜೀವನ, ವೃತ್ತಿ ಜೀವನ ಹಾಗೂ ಜೈಲಿನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಈ ಕುರಿತು ಸಿನಿಮಾ ಮಾಡಲು ರೂಪಾ ಸಹ ಸಮ್ಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದಿಟ್ಟ ಅಧಿಕಾರಿ ರೂಪಾರ ಪಾತ್ರವನ್ನ ಯಾರು ಮಾಡುತ್ತಾರೆ ಎಂಬುದೇ ಈಗ ತೀವ್ರ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಬಹುಭಾಷಾ ನಟಿಯರಾದ ಅನುಷ್ಕಾ ಹಾಗೂ ನಯನತಾರಾ ಹೆಸರು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಇನ್ನೂ ಪಕ್ಕಾ ಆಗಿಲ್ಲ. ಸದ್ಯ ರಮೇಶ್, ರಾಜೀವ್ ಗಾಂಧಿ ಹತ್ಯೆ ಕುರಿತ ‘ಆಸ್ಫೋಟ’ ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಮುಗಿದ ಕೂಡಲೇ ‘ಐಪಿಎಸ್ ರೂಪಾ’ ಚಿತ್ರ ಸೆಟ್ಟೇರಲಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಗುಳುನಗೆ ಟ್ರೇಲರ್ ಔಟ್… ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ