Select Your Language

Notifications

webdunia
webdunia
webdunia
webdunia

ಬ್ರಾಹ್ಮಣರ ಕೆಂಗಣ್ಣಿಗೆ ಗುರಿಯಾಯ್ತು ಅಲ್ಲು ಅರ್ಜುನ್ ಅಭಿನಯದ ಡಿಜೆ ಚಿತ್ರದ ಗುಡಿಲೋ ಬಡಿಲೋ ಹಾಡು

ಬ್ರಾಹ್ಮಣರ ಕೆಂಗಣ್ಣಿಗೆ ಗುರಿಯಾಯ್ತು ಅಲ್ಲು ಅರ್ಜುನ್ ಅಭಿನಯದ ಡಿಜೆ ಚಿತ್ರದ ಗುಡಿಲೋ ಬಡಿಲೋ ಹಾಡು
ಹೈದರಾಬಾದ್‌ , ಸೋಮವಾರ, 5 ಜೂನ್ 2017 (13:22 IST)
ಹೈದರಾಬಾದ್‌ : ಅಲ್ಲು ಅರ್ಜುನ್‌ ಅಭಿಯನದ ಬಹುನಿರೀಕ್ಷಿತ ತೆಲುಗುದುವ್ವಾಡ ಜಗನ್ನಾಥಂ( ಡಿಜೆ ) ಚಿತ್ರದ ಹಾಡೊಂದರ ಸಾಲು ವಿವಾದಕ್ಕೆ ಕಾರಣವಾಗಿದೆ. ಹಾಡಿನ ಸಾಲಿನಲ್ಲಿ ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಹೇಳಿರುವ ಹಿನ್ನಲೆಯಲ್ಲಿ ಬ್ರಾಹ್ಮಣ ಸಂಘಟನೆಗಳು ಸೆನ್ಸಾರ್‌ ಮಂಡಳಿಗೆ ದೂರು ನೀಡಿವೆ.
 
 ಡಿಜೆ ಚಿತ್ರದ ಇತ್ತೀಚೆಗೆ ಬಿಡುಗಡೆಯಾದ ಗುಡಿಲೋ ಬಡಿಲೋ ಮಡಿಲೋ ವೋಡಿಲೋ..ಎಂಬ ಹಾಡಿನಲ್ಲಿ ಬ್ರಾಹ್ಮಣರ ಕುರಿತು ನಮಕಮ್ ಚಮಕಂ ಎಂಬ ವಿವಾದಿತ ಸಾಲುಗಳಿದ್ದು ಅದನ್ನು ತೆಗೆಯಬೇಕೆಂದು ಅಖೀಲ ಭಾರತ ಬ್ರಾಹ್ಮಣ ಪರಿಷತ್‌ನ ದ್ರೋಣಂ ರಾಜು ಶ್ರೀನಿವಾಸ ರಾವ್‌ ಅವರು ಸೆನ್ಸಾರ್‌ ಮಂಡಳಿ, ಸಚಿವರು ಮತ್ತು ಡಿಜಿಪಿಗಳಿಗೆ ದೂರು ನೀಡಿ ಮನವಿ ಮಾಡಿದ್ದಾರೆ.
 
ಚಿತ್ರದಲ್ಲಿ ಭಗವಾನ್ ಶಿವನ ಮಂತ್ರ ನಮಕಂ ಚಮಕಂನಿಂದ ಪದಗಳನ್ನು ತೆಗೆದುಕೊಂಡು ರೊಮ್ಯಾಂಟಿಕ್‌ ಹಾಡಿನಲ್ಲಿ ಬಳಸಿಕೊಂಡು ಅವಹೇಳನ ಮಾಡಿದ್ದಾರೆ ಅಲ್ಲದೇ ಬ್ರಾಹ್ಮಣರ ಬಗ್ಗೆ ಕೀಳಾಗಿ ಬಿಂಬಿಸಲಾಗಿದೆ ನಾವು ಅದನ್ನು ಸಹಿಸುವುದಿಲ್ಲ ಎಂದು ಶ್ರೀನಿಸಾಸ್‌ ರಾವ್‌ ಕಿಡಿಕಾರಿದ್ದಾರೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್ ಹಾದಿ ಹಿಡಿದ ನಿರ್ದೇಶಕ ಎಸ್. ನಾರಾಯಣ್ ಕುಟುಂಬ