Select Your Language

Notifications

webdunia
webdunia
webdunia
webdunia

ಚಿತ್ರಕಥೆ ಕದ್ದ ಆರೋಪ: ಮೈದಾನ್ ಸಿನಿಮಾ ಬಿಡುಗಡೆಗೆ ಮೈಸೂರು ನ್ಯಾಯಾಲಯದಿಂದ ತಡೆ

Maidan Movie

Sampriya

ಮುಂಬೈ , ಮಂಗಳವಾರ, 9 ಏಪ್ರಿಲ್ 2024 (14:52 IST)
Photo Courtesy X
ಮುಂಬೈ: ಅಜಯ್ ದೇವಗನ್ ನಟನೆಯ, ಬೋನಿ ಕಪೂರ್ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ  ಮೈದಾನ್‌ ಏಪ್ರಿಲ್ 11ರಂದು ರಿಲೀಸ್ ಆಗಬೇಕಿದೆ. ಆದರೆ, ಅದಕ್ಕೂ ಮೊದಲೇ ಸಿನಿಮಾ ಬಿಡುಗಡೆಗೆ ವಿಘ್ನ ಎದುರಾಗಿದೆ.

​​ಅಮಿತ್ ಶರ್ಮಾ ನಿರ್ದೇಶನದ ಈ ಚಿತ್ರಕ್ಕೆ ಕೊನೆಯ ಕ್ಷಣದಲ್ಲಿ ತೊಂದರೆ ಎದುರಾಗಿದೆ. ಕಥೆ ಕದ್ದ ಆರೋಪವನ್ನು ಮೈದಾನ್ ತಂಡ ಎದುರಿಸುತ್ತಿದೆ. ಹೀಗಾಗಿ, ಸಿನಿಮಾ ಬಿಡುಗಡೆಗೆ ಮೈಸೂರು ಕೋರ್ಟ್‌ ತಡೆ ನೀಡಿದೆ. ಈ ತಡೆಯನ್ನು ತೆಗೆಯುವಂತೆ ಚಿತ್ರತಂಡ ಕೋರ್ಟ್​ ಮೆಟ್ಟಿಲೇರೋ ಸಾಧ್ಯತೆ ಇದೆ.

ತಮ್ಮ ಸಿನಿಮಾದ ಮೂಲ ಕತೆ ಕದ್ದಿದ್ದಾರೆ ಎಂದು ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ ಕೋರ್ಟ್‌ ಮೆಟ್ಟಿಲೇರಿದ್ದರು. 2018ರಲ್ಲಿ ಚಿತ್ರದ ಕತೆ ಬಗ್ಗೆ ಲಿಂಕ್ಡಿನ್​ನಲ್ಲಿ ಹಾಕಿದ್ದೆ. ಕಥೆ ಗಮನಿಸಿ ಸುಕ್​ದಾಸ್ ಸೂರ್ಯವಂಶಿ ಎಂಬುವವರು ಚರ್ಚಿಸಿದ್ದರು. 2019ರ ಫೆಬ್ರವರಿಯಲ್ಲಿ ಹೆಸರು​ ನೋಂದಣಿ ಮಾಡಿಸಿದ್ದೆ. ನನ್ನ ಮೂಲ ಕತೆ ಕದ್ದು ಮೈದಾನ್ ಎಂದು ಹೆಸರಿಟ್ಟಿದ್ದಾರೆ. ನನಗೆ ಮೈಸೂರು ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ ಎಂದು ಮೈಸೂರಿನಲ್ಲಿ ದೂರುದಾರ ಕಿರಣ್ ಕುಮಾರ್ ಹೇಳಿದ್ದಾರೆ.

ಬೋನಿ ಕಪೂರ್, ಅಜಯ್ ದೇವಗನ್, ಪ್ರಿಯಾಮಣಿ ಮೊದಲಾದವರು ನಟಿಸಿದ್ದಾರೆ. ಸೈಯದ್ ಅಬ್ದುಲ್ ರಹೀಮ್ ಎಂಬ ವ್ಯಕ್ತಿ ಬಗ್ಗೆ ಚಿತ್ರಕಥೆ ಇದೆ. ಅವರು ಭಾರತದ ಫುಟ್​ಬಾಲ್​ ಕೋಚ್ ಆಗಿದ್ದರು. ಅವರು ಫುಟ್​ಬಾಲ್​ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಒಂದು ತಿಂಗಳು ಸಿನಿಮಾ ಶೂಟಿಂಗ್ ಮಾಡಲ್ಲ ದರ್ಶನ್