Select Your Language

Notifications

webdunia
webdunia
webdunia
webdunia

ಧೂಳೆಬ್ಬಿಸುತ್ತಿರುವ ನಟ ತಾಲಾ ಅಜಿತ್!

ಧೂಳೆಬ್ಬಿಸುತ್ತಿರುವ ನಟ ತಾಲಾ ಅಜಿತ್!
Chennai , ಶನಿವಾರ, 4 ಫೆಬ್ರವರಿ 2017 (10:56 IST)
ಕೋಲಿವುಡ್ ನಟ ತಾಲಾ ಅಜಿತ್ ಚಿತ್ರಗಳೆಂದರೆ ಅದಕ್ಕೆಂದೇ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಇದೆ. ಇದೀಗ ಅವರ 57ನೇ ಚಿತ್ರಕ್ಕೆ ’ವಿವೇಗಮ್’ ಎಂದು ಹೆಸರಿಡಲಾಗಿದೆ. ಸಿರುತ್ತೆ ಶಿವ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದು. ಇತ್ತೀಚೆಗಷ್ಟೇ ಬಲ್ಗೇರಿಯಾದಲ್ಲಿ ಶೂಟಿಂಗ್ ನಡೆಯಿತು. ಚೆನ್ನೈನಲ್ಲಿ ಅಂತಿಮ ಹಂತದ ಚಿತ್ರೀಕರಣ ನಡೆಯಲಿದೆ.
 
ಅಜಿತ್ ಅಭಿನಯದ ವೀರಂ, ವೇದಾಳಂ ಚಿತ್ರಗಳ ಶೀರ್ಷಿಕೆಗಳು ’ವಿ’ನಿಂದ ಆರಂಭವಾಗಿ ಬಾಕ್ಸಾಫೀಸಲ್ಲಿ ಭರ್ಜರಿ ಜಯ ಸಾಧಿಸಿದ್ದವು. ಈ ಹಿನ್ನೆಲೆಯಲ್ಲಿ ಅವರ ಮುಂದಿನ ಚಿತ್ರವೂ ವಿ ಅಕ್ಷರದಿಂದಲೇ ಆರಂಭವಾಗುತ್ತಿದೆ. ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಥ್ರಿಲ್ಲರ್ ಕೈಮ್ ಕಥೆಯೊಂದಿಗೆ ತೆರೆಗೆ ತರಲಾಗುತ್ತಿದೆ.
 
ಚಿತ್ರದ ಫಸ್ಟ್ ಲುಕ್ ಈಗಾಗಲೆ ಬಿಡುಗಡೆಯಾಗಿದೆ. ಅಭಿಮಾನಿಗಳಿಂದಲೂ ಆ ಪೋಸ್ಟರ್ ಗೆ ಪ್ರೋತ್ಸಾಹ ಸಿಕ್ಕಿದೆ. ಈ ಚಿತ್ರದಲ್ಲಿ ಅಜಿತ್‌ಗೆ ಇಬ್ಬರು ಹೀರೋಯಿನ್‍ಗಳು. ಒಬ್ಬರು ಕಾಜಲ್ ಅಗರವಾಲ್ ಮತ್ತೊಬ್ಬರು ಅಕ್ಷರಾ ಹಾಸನ್. ಜೂನ್‌ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ. ಈ ಚಿತ್ರಕ್ಕೆ ಸಂಬಂಧಿಸಿದ ಇನ್ನೊಂದು ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ ಅಜಿತ್ ಸಿಕ್ಸ್ ಪ್ಯಾಕ್‍ನಲ್ಲಿ ದರ್ಶನ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜಯ್ ದತ್ ಜೀವನ ಯುವಕರಿಗೆ ಒಂದು ಪಾಠ!