Select Your Language

Notifications

webdunia
webdunia
webdunia
webdunia

ಸಂಜಯ್ ದತ್ ಜೀವನ ಯುವಕರಿಗೆ ಒಂದು ಪಾಠ!

ರಣಬೀರ್ ಕಪೂರ್
Mumbai , ಶನಿವಾರ, 4 ಫೆಬ್ರವರಿ 2017 (10:36 IST)
ಬಾಲಿವುಡ್ ನಟ ಸಂಜಯ್ ದತ್ ಜೀವನ ಎಷ್ಟೋ ಏರಿಳಿತಗಳಿಂದ ಕೂಡಿರುವಂತದ್ದು. ಮಾಡಿದ ತಪ್ಪಿಗೆ ಜೈಲುಶಿಕ್ಷೆಯನ್ನೂ ಅನುಭವಿಸಿದ್ದಾನೆ. ಆದರೆ ಅವರ ಜೀವನ ಯುವಜನತೆಗೆ ಒಂದು ಪಾಠ ಇದ್ದಂತೆ ಎಂದಿದ್ದಾರೆ ಚಾಕೋಲೇಟ್ ಹೀರೋ ರಣಬೀರ್ ಕಪೂರ್.
 
ರಣಬೀರ್ ಕಪೂರ್ ಮುಖ್ಯಭೂಮಿಕೆಯಲ್ಲಿರುವ ಸಂಜಯ್ ದತ್ ಆತ್ಮಕಥೆಯನ್ನು ರಾಜ್ ಕುಮಾರ್ ಹಿರಾನಿ ತೆರೆಗೆ ತರುತ್ತಿದ್ದಾರೆ. "ಈ ಬಯೋಪಿಕ್ ಮೂಲಕ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. ಗೊತ್ತು ಗೊತ್ತಿಲ್ಲದಂತೆ ಮನುಷ್ಯ ಮಾಡುವ ತಪ್ಪುಗಳು, ತಂದೆ-ಮಗನ ಸಂಬಂಧ, ಅದೇ ರೀತಿ ಸ್ನೇಹಿತರೊಂದಿಗೆ ಸಂಜಯ್ ಅನುಬಂಧ, ಅವರ ಜೀವನದಲ್ಲಿ ಬಂದಂತಹ ಮಹಿಳೆಯರು ಇವುಗಳ ಬಗ್ಗೆ ಪ್ರಸ್ತಾವನೆ ಇದೆ.
 
ಆತನ ಜೀವನದಲ್ಲಿ ವಿಷಾದ, ನೋವು, ಸಂತೋಷ ಎಲ್ಲವೂ ಇದೆ. ಜೀವನದಲ್ಲಿ ಮಾಡಿದ ತಪ್ಪುಗಳಿಂದ ಯುವಜನತೆ ಸಾಕಷ್ಟು ಕಲಿಯುವುದಿದೆ ಎಂದಿದ್ದಾರೆ ರಣಬೀರ್. ಸಂಜಯ್ ದತ್ ಜೀವನದಲ್ಲಿ ಕೆಲವು ತಪ್ಪು ಮಾಡಿ ಶಿಕ್ಷೆ ಅನುಭವಿಸಿದ್ದಾನೆ. ಅದಕ್ಕಿಂತಲೂ ಹೆಚ್ಚು ನೋವುಂಡಿದ್ದಾನೆ. 
 
ಯಾಕೆಂದರೆ ಅವರ ಮೊದಲ ಸಿನಿಮಾ ಬಿಡುಗಡೆಗೂ ಸ್ವಲ್ಪ ದಿನಗಳ ಮುಂಚೆ ತಾಯಿಯನ್ನು (ನರ್ಗೀಸ್) ಕಳೆದುಕೊಂಡ. ವೈವಾಹಿಕ ಜೀವನದಲ್ಲಿ ಸೋಲನುಭವಿಸಿದ. ಡ್ರಗ್ಸ್‌ಗೆ ಚಟಕ್ಕೆ ಬಲಿಯಾದ, ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಜೈಲು ಸೇರಿದ. ಆ ಬಳಿಕ ಒಳ್ಳೆ ನಡತೆ ಆಧಾರದ ಮೇಲೆ ಬಿಡುಗಡೆಯಾದ. ಆದರೆ ಸಿನಿಮಾವನ್ನು ಈ ಕೋನದಲ್ಲಿ ತೋರಿಸಬೇಕೆಂದ ಉದ್ದೇಶ ನಮಗಿಲ್ಲ ಎಂದಿದ್ದಾರೆ ರಣಬೀರ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನಿಯರ್ ಎನ್ಟಿಆರ್ ಈಗ ಇನ್ನಷ್ಟು ಹಗುರ ಆಸಾಮಿ