Publish Date: Wed, 12 Jul 2017 (10:32 IST)
Updated Date: Wed, 12 Jul 2017 (10:34 IST)
ಬೆಂಗಳೂರು: ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಸಿನಿಮಾಗಳೆಂದರೆ ನೆನಪಾಗುವುದು ಜೋಗದ ಗುಂಡಿ. ಜೋಗ್ ಫಾಲ್ಸ್ ನ್ನು ಅಷ್ಟು ಅದ್ಭುತವಾಗಿ ತೋರಿಸಿದ್ದು ಇವರಿಬ್ಬರ ಕಾಂಬಿನೇಷನ್ ನ ಮುಂಗಾರು ಮಳೆ. ಇದೀಗ ಮತ್ತೆ ಇಬ್ಬರೂ ಜೋಗದ ಗುಡ್ಡವೇರಿದ್ದಾರೆ.
ಆದರೆ ಈ ಬಾರಿ ಚಿತ್ರೀಕರಣ ಮಾಡುವುದಕ್ಕೆ ಹೋಗಲಿಲ್ಲವಂತೆ. ಸುಮ್ಮನೇ ಹಳೆಯ ನೆನಪು ಮೆಲುಕು ಹಾಕಲು ಇಬ್ಬರೂ ಅಲ್ಲಿಗೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಮುಗುಳು ನಗೆ ಚಿತ್ರಕ್ಕಾಗಿ ಹುಬ್ಬಳ್ಳಿಗೆ ಚಿತ್ರೀಕರಣಕ್ಕೆ ಹೋಗಿದ್ದ ಭಟ್-ಗಣೇಶ್ ಜೋಡಿ ಹಾಗೂ ಚಿತ್ರತಂಡ ವಾಪಸ್ ಬರುವಾಗ ಇದೇ ಜೋಗ್ ಫಾಲ್ಸ್ ನ ದಾರಿಯಾಗಿ ವಾಪಸಾಗುತ್ತಿತ್ತಂತೆ.
ಆಗ ಇಬ್ಬರಿಗೂ ಜೋಗದ ತಪ್ಪಲೇರಿ ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುವ ಮನಸ್ಸಾಗಿದೆ. ಇದನ್ನು ಗಣೇಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಮಾಡಿ ಅಭಿಮಾನಿಗಳಿಗೆ ತೋರಿಸಿದ್ದಾರೆ. ಮತ್ತೊಮ್ಮೆ ಜೋಗದ ದೃಶ್ಯಗಳೇನಾದರೂ ಮುಗುಳು ನಗೆಯಲ್ಲಿ ಕಾಣಬಹುದಾ ನೋಡಬೇಕಷ್ಟೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ