Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಮಾಡಿದ ಭೀಷ್ಮ ಪ್ರತಿಜ್ಞೆ ಏನದು?

ಕಿಚ್ಚ ಸುದೀಪ್ ಮಾಡಿದ ಭೀಷ್ಮ ಪ್ರತಿಜ್ಞೆ ಏನದು?
Bangalore , ಬುಧವಾರ, 12 ಜುಲೈ 2017 (09:30 IST)
ಬೆಂಗಳೂರು: ಶಿವರಾಜ್ ಕುಮಾರ್ ಈ ವರ್ಷ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಕಿಚ್ಚ ಸುದೀಪ್ ಕೂಡಾ ಅದೇ ಹಾದಿಯಲ್ಲಿದ್ದಾರೆ. ಆದರೆ ಅವರು ಈ ವರ್ಷ ಮಾತ್ರವಲ್ಲ, ಎಂದೆಂದಿಗೂ ಆಚರಿಸಲ್ಲ ಎಂದಿದ್ದಾರೆ.

 
ಅಭಿಮಾನಿಗಳಿಗೆ ಪತ್ರ ಬರೆದಿರುವ ಸುದೀಪ್, ಪ್ರತೀ ವರ್ಷ ನೀವು ನನ್ನ ಹುಟ್ಟುಹಬ್ಬಕ್ಕೆ ಬಂದು ಶುಭ ಹಾರೈಸುವುದು ನೋಡಿ ಖುಷಿಯಾಗುತ್ತಿತ್ತು. ನಿಮ್ಮ ಪ್ರೀತಿ ಬೆಲೆ ಕಟ್ಟಲಾಗದ್ದು. ಆದರೆ ನನ್ನ ಹುಟ್ಟುಹಬ್ಬಕ್ಕೆ ಯಾರೋ ಕಷ್ಟಪಟ್ಟು ದುಡಿದ ದುಡ್ಡನ್ನು ಪೋಲು ಮಾಡುತ್ತಾರೆ.

ಇದೆಲ್ಲಾ ಇನ್ನು ಮುಂದೆ ಮಾಡಬೇಡಿ. ಅದರ ಬದಲು ಆ ಹಣವನ್ನು ಒಳ್ಳೆಯ, ನಾಲ್ಕು ಜನಕ್ಕೆ ಸಹಾಯವಾಗುವಂತಹ ಕೆಲಸಕ್ಕೆ ಬಳಸಿಕೊಳ್ಳಿ. ಅದುವೇ ನೀವು ನನಗೆ ಕೊಡುವ ದೊಡ್ಡ ಗಿಫ್ಟ್. ಇನ್ನು ಮುಂದೆ ನಾನು ಕೂಡಾ ಬರ್ತ್ ಡೇ ದಿನ ಮನೆಯಲ್ಲಿ ಇರಲ್ಲ. ಯಾವುದಾದರೂ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಸುದೀಪ್ ಪ್ರತಿಜ್ಞೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕತ್ರೀನಾ ಕೈಫ್ ಲಿಬಿಯಾ ಸರ್ವಾಧಿಕಾರಿ ಗಡಾಫಿ ಜೊತೆಗಿದ್ದ ಪೋಟೋ ವೈರಲ್