Webdunia - Bharat's app for daily news and videos

Install App

ಡಿವೋರ್ಸ್ ಬೆನ್ನಲ್ಲೇ ಮತ್ತೇ ಹಸೆಮಣೆ ಏರಿದ್ರಾ ಜಯಂ ರವಿ, ಪೋಟೋ ಹಿಂದಿನ ಅಸಲಿಯತ್ತೇನು

Sampriya
ಭಾನುವಾರ, 6 ಅಕ್ಟೋಬರ್ 2024 (15:03 IST)
Photo Courtesy X
ಮಾಜಿ ಪತ್ನಿ ಆರತಿ ಅವರಿಗೆ ಡಿವೋರ್ಸ್ ನೀಡಿದ ಬೆನ್ನಲ್ಲೇ ಖ್ಯಾತ ನಟ ಜಯಂ ರವಿ ಮತ್ತೇ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರಬಿಂದುವಾಗಿದ್ದಾರೆ. ಮೊದಲು ಜಯಂ ರವಿ ಅವರು ಸಾಮಾಜಿಕ ಜಾಲತಾಣದಲ್ಲಿ ಆರತಿ ಅವರೊಂದಿಗೆ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದಾಗಿ ಘೋಷಣೆ ಮಾಡಿದರು. ಇದರ ಬೆನ್ನಲ್ಲೇ ಆರತಿ ಅವರು ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ನನಗೂ ಹಾಗೂ ನನ್ನ ಮಕ್ಕಳಿಗೂ ಅನ್ಯಾಯವಾಗಿದೆ ಎಂದು ಆರೋಪ ಮಾಡಿದ್ದರು.

 ಇದಕ್ಕೆ ಪ್ರತಿಕ್ರಿಯಿಸಿದ ಜಯಂ ರವಿ ಅವರು ಮನೆಯಲ್ಲಿ ನನಗೆ ಕಿಂಚಿತ್ತೂ ಗೌರವವಿಲ್ಲ ಮತ್ತು ನನ್ನ ಜೀವನ ನಾಯಿಗಿಂತ ಕಡೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದರು. ಇದರ ನಡುವೆ ಇದೀಗ ಜಯಂ ರವಿ ಅವರು ನಟಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಯಂ ರವಿ ಮತ್ತು ನಟಿ ಪ್ರಿಯಾಂಕಾ ಮೋಹನ್‌ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ಅಭಿಮಾನಿಗಳಲ್ಲಿ ಗೊಂದಲದ ಅಲೆಗೆ ಕಾರಣವಾಯಿತು. ಚಿತ್ರದಲ್ಲಿ, ಇಬ್ಬರು ಮದುವೆಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಜಯಂ ರವಿ ಸಿಲ್ಕ್ ಕುರ್ತಾ ಮತ್ತು ಧೋತಿ ಧರಿಸಿದ್ದರೆ, ಪ್ರಿಯಾಂಕಾ ಮೋಹನ್ ಗುಲಾಬಿ ಬಣ್ಣದ ಸೀರೆಯಲ್ಲಿದ್ದರು, ಇಬ್ಬರೂ ಹೂಮಾಲೆಯಿಂದ ಅಲಂಕರಿಸಿದ್ದರು.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಚ್ಛೇದನವನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ಜಯಂ ರವಿ ಅವರು ಹೊಸ ಸಂಬಂಧಕ್ಕೆ ವೇಗವಾಗಿ ತೆರಳಿದ್ದಾರೆಯೇ ಎಂದು ಪ್ರಶ್ನೆಯನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ.

ಆದರೆ ಅಸಲಿಯತ್ತೇ ಬೇರೆಯಿದೆ. ವೈರಲ್​ ಆಗಿರುವ ಫೋಟೋ ಪ್ರಿಯಾಂಕಾ ಮೋಹನ್ ಮತ್ತು ಜಯಂ​ ರವಿ ಅವರ ಹೊಸ ಚಿತ್ರದ ಫೋಟೋ ಆಗಿದೆ. ಇದು ಬ್ರದರ್ ಸಿನಿಮಾದ ಫೋಟೋ. ಈ ಸಿನಿಮಾವನ್ನು ಎಂ. ರಾಜೇಶ್ ಅವರು ನಿರ್ದೇಶಿಸಿದ್ದಾರೆ. 2022ರ ಆಗಸ್ಟ್​ ತಿಂಗಳಲ್ಲಿ ಈ ಚಿತ್ರ ಘೋಷಣೆಯಾಯಿತು. ಈ ಚಿತ್ರಕ್ಕಾಗಿ ಮಾಡಿಸಿದ್ದ ಫೋಟೋಶೂಟ್​ ಇಂದು ವೈರಲ್​ ಆಗುತ್ತಿದೆ. ಅಂದರೆ, ಈ ಸಿನಿಮಾ ಅಕ್ಟೋಬರ್ 31 ರಂದು ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗಲಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments