Webdunia - Bharat's app for daily news and videos

Install App

ಜಾನಿ ಮಾಸ್ಟರ್‌ಗೆ ಘೋಷಣೆಯಾಗಿದ್ದ ರಾಷ್ಟ್ರೀಯ ಪ್ರಶಸ್ತಿ ಅಮಾನತು ಮಾಡಿದ್ದು ಯಾಕೆ ಗೊತ್ತಾ

Sampriya
ಭಾನುವಾರ, 6 ಅಕ್ಟೋಬರ್ 2024 (14:21 IST)
ನವದೆಹಲಿ: ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಅವರಿಗೆ ಘೋಷಿಸಲಾಗಿದ್ದ ರಾಷ್ಟ್ರೀಯ ಪ್ರಶಸ್ತಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಿಂಪಡೆಯಲಾಗದೆ.

ಜಾನಿ ಮಾಸ್ಟರ್ ವಿರುದ್ಧ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ  ಪ್ರಕರಣ ದಾಖಲಾಗಿದೆ. ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ, ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದ್ದರಿಂದ ಅದರ ಸ್ವೀಕಾರ ಸಮಾರಂಭಕ್ಕೆ ತೆರಳಲು ಇತ್ತೀಚೆಗೆ ಮಧ್ಯಂತರ ಜಾಮೀನು ಪಡೆದಿದ್ದರು.

ಜಾನಿ ಮಾಸ್ಟರ್ ನಿಜವಾದ ಹೆಸರು ಶೇಕ್ ಜಾನಿ ಬಾಷಾ ಎಂಬುದಾಗಿದೆ. ತಿರುಚಿತ್ರಂಬಲಂ ನ ಚಿತ್ರದ ಮೇಘಮ್ ಕರುಕ್ಕಥಾ ಹಾಡಿಗೆ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದರು. ನೃತ್ಯ ನಿರ್ದೇಶಕ ಸತೀಶ್ ಕೃಷ್ಣನ್ ಅವರೊಂದಿಗೆ ಜಾನಿ ಮಾಸ್ಟರ್ ಪ್ರಶಸ್ತಿ ಹಂಚಿಕೊಂಡಿದ್ದರು.

ಇದೀಗ, ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೋಶವು ಪ್ರಶಸ್ತಿಯನ್ನು ಅಮಾನತುಗೊಳಿಸಿದೆ ಎಂದು ಪ್ರಕಟಣೆ ನೀಡಿದೆ.

ನವದೆಹಲಿಯಲ್ಲಿ ಅಕ್ಟೋಬರ್ 8ರಂದು ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಾನಿ ಮಾಸ್ಟರ್ ಅವರಿಗೆ ನೀಡಿದ್ದ ಆಹ್ವಾನವನ್ನೂ ಹಿಂತೆಗೆದುಕೊಳ್ಳಲಾಗಿದೆ ಎಂದು ಹಿಂದೂಸ್ತಾನ ಟೈಮ್ಸ್‌ ವರದಿ ಮಾಡಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Operation Sindoor ಬಗ್ಗೆ ನಾಚಿಕೆಪಡಬೇಕು ಎಂದ ಕೇರಳದ ನಟಿ ಅಮೀನಾ ನಿಜಂ ಯಾರು

Amina Nijam: ಆಪರೇಷನ್ ಸಿಂಧೂರ್ ಮಾಡಿದ್ದಕ್ಕೆ ಮಲಯಾಳಂ ನಟಿ ಅಮಿನಾಗೆ ಭಾರತೀಯಳಾಗಿ ನಾಚಿಕೆಯಾಗ್ತಿದೆಯಂತೆ

Operation Sindoora: ಪವಿತ್ರ ಸಿಂಧೂರಕ್ಕೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಎಂದ ಕಿಚ್ಚ ಸುದೀಪ್

ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿದ್ದ ರಿಷಬ್‌ ಶೆಟ್ಟಿಗೆ ದೊಡ್ಡ ಶಾಕ್‌: ಸಹ ಕಲಾವಿದ ಸಾವು, ಆಗಿದ್ದೇನೂ

ನಿಮ್ಮನ್ನು ಬ್ಯಾನ್ ಮಾಡಿದ್ರೆ ಕೆಎಫ್‌ಐಗೆ ‌ನಷ್ಟ: ಸೋನು ನಿಗಮ್‌ಗೆ ಬೆಂಬಲ ಸೂಚಿಸಿದ ಕನ್ನಡ ನಟಿಗೆ ತರಾಟೆ

ಮುಂದಿನ ಸುದ್ದಿ