Webdunia - Bharat's app for daily news and videos

Install App

ಕಿಚ್ಚ ಸುದೀಪ್-ದರ್ಶನ್ ಅಭಿಮಾನಿಗಳ ನಡುವೆ ಕಿಚ್ಚು ಹತ್ತಿಸಿದ ನಟ ಆದಿತ್ಯ ಸಿನಿಮಾ

Webdunia
ಶುಕ್ರವಾರ, 31 ಜನವರಿ 2020 (10:04 IST)
ಬೆಂಗಳೂರು: ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ನಾಯಕರಾಗಿ ನಟಿಸಿರುವ ಮುಂದುವರಿದ ಅಧ್ಯಾಯ ಸಿನಿಮಾ ಈಗ ಮತ್ತೆ ಕಿಚ್ಚ ಸುದೀಪ್ ಮತ್ತು ದರ್ಶನ್ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ.

 

ಈ ಎರಡೂ ಸ್ಟಾರ್ ನಟರು ಮುನಿಸಿಕೊಂಡು ದೂರವಾದ ಬಳಿಕ ಅಭಿಮಾನಿಗಳ ನಡುವೆ ವಾರ್ ನಡೆಯುತ್ತಲೇ ಇರುತ್ತವೆ. ಇದೀಗ ಆದಿತ್ಯ ನಟನೆಯ ಸಿನಿಮಾ ಟ್ರೈಲರ್ ಲಾಂಚ್ ವೇಳೆ ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕರ ಕುರಿತಾಗಿ ಒಂದು ವಿಡಿಯೋ ಪ್ರಸಾರ ಮಾಡಲಾಯಿತು.

ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಮಾತ್ರ ಇರಲಿಲ್ಲ. ಇದರ ಬಗ್ಗೆ ಪತ್ರಕರ್ತರು ಕೇಳಿದಾಗ ಆದಿತ್ಯ ನೋ ಕಾಮೆಂಟ್ಸ್. ಈ ವಿಡಿಯೋ ಕ್ರಿಯೇಟ್ ಮಾಡಿದವರನ್ನೇ ಕೇಳಿ ಎಂದಿದ್ದಾರೆ. ಅಸಲಿಗೆ ಆದಿತ್ಯ ಮತ್ತು ದರ್ಶನ್ ಆತ್ಮೀಯ ಸ್ನೇಹಿತರು. ಟ್ರೈಲರ್ ಲಾಂಚ್ ಗೆ ದರ್ಶನ್ ಅತಿಥಿಯಾಗಿದ್ದರು. ಹೀಗಾಗಿ ಆದಿತ್ಯ ಸುದೀಪ್ ಬಗ್ಗೆ ಕೇಳಿದಾಗ ನೋ ಕಾಮೆಂಟ್ಸ್ ಎಂದಿದ್ದು ಕಿಚ್ಚನ ಅಭಿಮಾನಿಗಳನ್ನು ಕೆರಳಿಸಿದೆ. ಇದೀಗ ಇದೇ ವಿಚಾರವನ್ನಿಟ್ಟುಕೊಂಡು ಎರಡೂ ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟ ಆರಂಭಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಡ್ರಗ್ಸ್ ಪ್ರಕರಣ: ಖ್ಯಾತ ನಿರ್ದೇಶಕನ ಸಹೋದರ ಅರೆಸ್ಟ್‌

Video, ಇವರೇನಾ ಸೂರ್ಯವಂಶದ ಸೊಸೆ: ಇಶಾ ಕೊಪ್ಪಿಕರ್ ನ್ಯೂ ಲುಕ್‌ಗೆ ದಂಗಾದ ಕನ್ನಡ ಫ್ಯಾನ್ಸ್‌

ಒಂದೇ ಬಾರಿಗೆ ಏಳು ಸಿನಿಮಾಗಳನ್ನು ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಸ್‌, ಇಲ್ಲಿದೆ ಡೀಟೆಲ್ಸ್‌

ಪ್ರಶಾಂತ್ ನೀಲ್, ಅಲ್ಲು ಅರ್ಜುನ್ ಜೋಡಿಯಲ್ಲಿ ಹೊಸ ಸಿನಿಮಾ

ಜೀವಬೆದರಿಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬುಲೆಟ್ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್

ಮುಂದಿನ ಸುದ್ದಿ
Show comments