ದರ್ಶನ್ ಬಗ್ಗೆ ಕೇಳಿದಾಗ ನಟಿ ಶ್ರೀಲೀಲಾರನ್ನು ಎಳೆದು ಕರೆದೊಯ್ದ ಸಹಾಯಕರು

Krishnaveni K
ಶುಕ್ರವಾರ, 21 ಜೂನ್ 2024 (16:06 IST)
ಬಳ್ಳಾರಿ: ಇಂದು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಬಳ್ಳಾರಿಯಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ನಟಿ ಶ್ರೀಲೀಲಾ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಆದರೆ ಈ ವೇಳೆ ದರ್ಶನ್ ಬಗ್ಗೆ ಕೇಳಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸಿಎಂ ಸಿದ್ದರಾಮಯ್ಯ, ಸಚಿವ ಸಂತೋಷ್ ಲಾಡ್ ಮುಂತಾದ ಗಣ್ಯರ ಜೊತೆ ವೇದಿಕೆ ಹಂಚಿಕೊಂಡು ಯೋಗ ಮಾಡಿದ್ದ ನಟಿ ಶ್ರೀಲೀಲಾ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಈ ವೇಳೆ ಕನ್ನಡ ನಾಡಿಗೆ ಬರುವುದು ನನಗೆ ಯಾವಾಗಲೂ ಖುಷಿ ಕೊಡುವ ವಿಚಾರ. ನಾನು ಯಾವುದೇ ಭಾಷೆಗೆ ಹೋದರೂ ಕನ್ನಡ ನನ್ನ ತವರು ಎಂದಿದ್ದಾರೆ.

ಇಲ್ಲಿಗೆ ಬರುವಾಗ ತವರಿಗೆ ಬರುವ ಫೀಲ್ ಆಗುತ್ತದೆ. ಇಂದು ಸಿಎಂ ಜೊತೆ ಯೋಗ ಮಾಡಿದ್ದು ನಿಜಕ್ಕೂ ಖುಷಿಕೊಟ್ಟಿದೆ. ಇಂತಹದ್ದೊಂದು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದರು. ಜೊತೆಗೆ ಕನ್ನಡದಲ್ಲಿ ಒಂದು ಸಿನಿಮಾ ಶೂಟಿಂಗ್ ಮುಗಿಸಿದ್ದೇನೆ. ಸದ್ಯದಲ್ಲೇ ಮುಂದಿನ ಘೋಷಣೆಯಾಗಲಿದೆ ಎಂದಿದ್ದಾರೆ.

ಮಾಧ್ಯಮ ಪ್ರತಿನಿಧಿಗಳು ಕನ್ನಡ ಚಿತ್ರರಂಗದ ಇತ್ತೀಚೆಗಿನ ಬೆಳವಣಿಗೆ ಬಗ್ಗೆ ಏನನಿಸುತ್ತದೆ ಎಂದು ಕೇಳಲು ಹೊರಟಾಗ ಇಲ್ಲಿಗೆ ಎಲ್ಲೇ ಹೋದರೂ ಕನ್ನಡ ಚಿತ್ರರಂಗಕ್ಕೇ ನನ್ನ ಮೊದಲ ಆಧ್ಯತೆ ಎಂದು ಮಾತು ಹಾರಿಸಿದರು. ಬಳಿಕ ನೇರವಾಗಿಯೇ ದರ್ಶನ್ ವಿಚಾರವಾಗಿ ಏನು ಹೇಳುತ್ತೀರಿ ಎಂದು ಕೇಳಿದಾಗ ಶ್ರೀಲೀಲಾ ಏನೋ ಹೇಳಲು ತಡವರಿಸಿದರೂ ಅಲ್ಲಿದ್ದ ಅವರ ಸಹಾಯಕರು, ಈ ಪ್ರಶ್ನೆಗಳೆಲ್ಲಾ ಈಗ ಬೇಡ ಎಂದು ಹೇಳಿ ಅವರನ್ನು ಅಲ್ಲಿಂದ ಕರೆದೊಯ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ನಂದಗೋಕುಲದ ಅಭಿದಾಸ್ ಈಗ ಲ್ಯಾಂಡ್ ಲಾರ್ಡ್ ನಲ್ಲಿ ಖಡಕ್ ಚಿಕ್ಕದಣಿ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments