Webdunia - Bharat's app for daily news and videos

Install App

ರಾಜನಂದಿನಿಯಾಗಿ ಕಿರುತೆರೆಗೆ ಬಂದ ನಟಿ ಸೋನು ಗೌಡ

Webdunia
ಗುರುವಾರ, 17 ಫೆಬ್ರವರಿ 2022 (20:56 IST)
ಬೆಂಗಳೂರು: ಹಿರಿ ತೆರೆಯ ನಟಿಯರು ಕಿರುತೆರೆಗೆ ಬರುವುದು ಇತ್ತೀಚೆಗಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಆ ಸಾಲಿಗೆ ನಟಿ ಸೋನು ಗೌಡ ಸೇರಿಕೊಂಡಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೆನ್ಸೇಷನಲ್ ಧಾರವಾಹಿ ಜೊತೆ ಜೊತೆಯಲಿ ಈಗ ಕುತೂಹಲಕಾರಿ ಘಟ್ಟದಲ್ಲಿದ್ದು, ಈ ಧಾರವಾಹಿಯಲ್ಲಿ ವೀಕ್ಷಕರು ಬಹುದಿನಗಳಿಂದ ‘ರಾಜನಂದಿನಿ’ ಪಾತ್ರ ಯಾರು ಮಾಡಲಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದರು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಸ್ಯಾಂಡಲ್ ವುಡ್ ನಟಿ ಸೋನು ಗೌಡ ಜೊತೆ ಜೊತೆಯಲಿ ಧಾರವಾಹಿಯಲ್ಲಿ ರಾಜನಂದಿನಿ ಪಾತ್ರ ಮಾಡಲಿದ್ದಾರೆ. ನಾಯಕ  ನಟ ಅನಿರುದ್ಧ್ ಗೆ ಜೋಡಿಯಾಗಿ ಸೋನು ಗೌಡ ಕೆಲವು ಸಂಚಿಕೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜನಂದಿನಿ ನಾಯಕ ಆರ್ಯವರ್ಧನ್ ಮೊದಲ ಪತ್ನಿಯ ಹೆಸರು. ಈ ಪಾತ್ರವೇ ಈ ಧಾರವಾಹಿಯ ಜೀವಾಳ. ಈಗ ಈ ಪ್ರಮುಖ ಪಾತ್ರ ಮಾಡಲು ಧಾರವಾಹಿ ತಂಡ ಬೇಡಿಕೆಯ ನಟಿಯನ್ನೇ ಕರೆತಂದಿದೆ. ಈ ಪಾತ್ರ ಮಾಡಲು ಹಿಂದಿ ನಟಿಯನ್ನು ಕರೆಸಿಕೊಳ್ಳುತ್ತಾರೆ ಎಂಬಿತ್ಯಾದಿ ರೂಮರ್ ಗಳು ಕೆಲವು ದಿನಗಳ ಹಿಂದಿತ್ತು. ಆದರೆ ಈಗ ಅಪ್ಪಟ ಕನ್ನಡತಿ ಸೋನು ಗೌಡ ಈ ಪವರ್ ಫುಲ್ ಪಾತ್ರರ ನಿಭಾಯಿಸಲಿದ್ದಾರೆ. ಇನ್ನು ಮುಂದಿನ ಸಂಚಿಕೆಗಳಲ್ಲಿ ರಾಜನಂದಿನಿಯ ಸುತ್ತ ನಡೆಯುವ ಕತೆ ರೋಚಕವಾಗಿರಲಿದ್ದು, ಪ್ರೇಕ್ಷಕರಿಗೆ ಥ್ರಿಲ್ ಕೊಡಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಡೆನೂರು ಮನುಗೆ ಬಿಗ್‌ ರಿಲೀಫ್‌, ಸಿನಿಮಾ ರಂಗದಿಂದ ವಿಧಿಸಿದ್ದ ನಿಷೇಧ ತೆರವು

ಬಿಗ್ ಬಾಸ್ ಕನ್ನಡ 12 ಗೆ ಕಿಚ್ಚ ಸುದೀಪ ಇರ್ತಾರಲ್ವಾ, ನಮಗೆ ಅಷ್ಟೇ ಸಾಕು ಎಂದ ಫ್ಯಾನ್ಸ್

ಕಾದು ನೋಡಿ ಎಂದಿದ್ದ ಬಿಗ್‌ಬಾಸ್ ಪ್ರಿಯರಿಗೆ ಕಿಚ್ಚ ಸುದೀಪ್ ಕಡೆಯಿಂದ ಸರ್ಪ್ರೈಸ್‌

ಮಡೆನೂರು ಮನು ಮೇಲಿದ್ದ ನಿಷೇಧ ವಾಪಸ್: ವಾಣಿಜ್ಯ ಮಂಡಳಿ ದಯೆ ತೋರಿದ್ದೇಕೆ

ಹೀರೋ ಆಗುವವರೆಗೆ ಫ್ಯಾನ್ಸ್ ಬೇಕು, ಆದ ಮೇಲೆ ಬರ್ತ್ ಡೇ ಆಚರಿಸಲು ಬೇಡ: ನಟ ಗಣೇಶ್ ಟ್ರೋಲ್

ಮುಂದಿನ ಸುದ್ದಿ
Show comments