Select Your Language

Notifications

webdunia
webdunia
webdunia
webdunia

ಕ್ಯಾನ್ಸರ್‌ಗೆ ತುತ್ತಾಗಿದ್ದ ನಟಿ ಸೋನಾಲಿ ಬೇಂದ್ರೆ ಜೀವಕ್ಕೆ ಗ್ಯಾರಂಟಿ ಕೊಟ್ಟಿರಲಿಲ್ಲವಂತೆ ವೈದ್ಯರು

ಕ್ಯಾನ್ಸರ್‌ಗೆ ತುತ್ತಾಗಿದ್ದ ನಟಿ ಸೋನಾಲಿ ಬೇಂದ್ರೆ  ಜೀವಕ್ಕೆ ಗ್ಯಾರಂಟಿ ಕೊಟ್ಟಿರಲಿಲ್ಲವಂತೆ ವೈದ್ಯರು

Sampriya

ಮುಂಬೈ , ಬುಧವಾರ, 1 ಮೇ 2024 (16:09 IST)
Photo Courtesy X
ಮುಂಬೈ: ಕನ್ನಡದಲ್ಲಿ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಜತೆ ಪ್ರೀತ್ಸೆ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟಿ  ಸೋನಾಲಿ ಬೇಂದ್ರೆ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು.

ಬಾಲಿವುಡ್‌ನ ಪ್ರಸಿದ್ಧ ನಟಿ ಸೋನಾಲಿ ಬೇಂದ್ರೆ ಅವರು ತಮ್ಮ ಬ್ಯೂಟಿ ಹಾಗೂ ನೈಜ ಅಭಿನಯದಲ್ಲಿ ಎಲ್ಲರ ಮನಸ್ಸನ್ನು ಗೆದಿದ್ದರು.

ಬಾಲಿವುಡ್‌ನ ಖ್ಯಾನ ನಟಿಯರ ಪೈಕಿ ಸೋನಾಲಿ ಕೂಡ ಒಬ್ಬರಾಗಿದ್ದು, ಹಲವು ಭಾಷೆಗಳಲ್ಲಿ ನಟಿಸಿ ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿದ್ದಾರೆ.  49 ವರ್ಷದ ಸೋನಾಲಿ ಅವರು ಈಚೆಗೆ ಸುದ್ದಿಯಾಗಿದ್ದು ತಮ್ಮ ಆರೋಗ್ಯ ಸಮಸ್ಯೆ ಸಲುವಾಗಿ. ಹೌದು ಸೋನಾಲಿ ಅವರು ಸ್ತನದ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆದು, ಸಾವನ್ನು ಗೆದ್ದು ಬಂದಿದ್ದಾರೆ.

ಈ ಬಗ್ಗೆ ಹೇಳಿಕೊಂಡಿರುವ ಸೋನಾಲಿ ಅವರು ತಾನು ಎದರಿಸಿದ ಕಷ್ಟದ ಕುರಿತಾಗಿ ಮಾತನಾಡಿದ್ದಾರೆ.

ಸೋನಾಲಿ ಬೇಂದ್ರೆ 2018ರಲ್ಲಿ ಕ್ಯಾನ್ಸರ್‌ಗೆ ತುತ್ತಾಗಿದ್ದು, ಕೆಲ ದಿನಗಳ ಕಾಲ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆದು ಅದರಿಂದ ಚೇತರಿಸಿಕೊಂಡಿದ್ದಾರೆ. ಇದೀಗ ಈ ನಟಿ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಸಂದರ್ಶನವೊಂದರಲ್ಲಿ ಪಾಲ್ಗೊಂಡ ನಟಿ, ತಮ್ಮ ಸಿನಿಪಯಣ ಹಾಗೂ ವೈಯಕ್ತಿಕ ಜೀವನದ ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಸೋನಾಲಿ ಬೇಂದ್ರೆ ಕ್ಯಾನ್ಸರ್ ವಿರುದ್ಧದ ಹೋರಾಟದ ಕುರಿತಾಗಿ ಮಾತನಾಡಿ, ನನಗೆ ಈ ಕಾಯಿಲೆ ಇರುವುದು ಗೊತ್ತಾದ ಬಳಿಕ ತುಂಬಾ ಕುಗ್ಗಿ ಹೋದೆ. ನನಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂದುಕೊಂಡಿರಲಿಲ್ಲ. ಈ ವೇಳೆ ನಾನೇಕೆ ಎಂದು ಯೋಚಿಸುತ್ತಿದ್ದೆ. ನಿಧಾನಗತಿಯಲ್ಲಿ ನನ್ನ ಚಿಂತನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು, ತಜ್ಞ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯಬಹುದು, ಬೆಂಬಲ ನೀಡುವ ಆನೇಕರು ನನ್ನ ಜತೆ ಇರುವಾಗು ನಾನು ಈ ರೀತಿ ಯೋಚನೆ ಮಾಡಬಾರದು ಎಂದುಕೊಂಡೆ.

ಚಿಕತ್ಸೆಗೆಂದು ನ್ಯೂಯಾರ್ಕ್‌ಗ್ ಹೋಗಿದ್ದಾಗ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿರುವುದು ಗೊತ್ತಾಯಿತು. ವೈದ್ಯರು ಬದುಕುಳಿಯುವ ಸಾಧ್ಯತೆ ಶೇ 30ರಷ್ಟು ಮಾತ್ರ ಇದೆ ಎಂದಿದ್ದರು.  ಆದರೆ ದೈರ್ಯದಿಂದ ಗೆದ್ದು ಬಂದಿದ್ದೇನೆ ಎಂದು ಮನಬಿಚ್ಚಿ ಮಾತನಾಡಿದರು.





Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸೇರಿದ 'ಅನುಪಮಾ' ಸೀರಿಯಲ್ ಖ್ಯಾತಿಯ ನಟಿ ರೂಪಾಲಿ ಗಂಗೂಲಿ