Select Your Language

Notifications

webdunia
webdunia
webdunia
webdunia

ಶ್ರುತಿ ಹಾಸನ್ ರೂ.150 ಕೋಟಿ ಬಜೆಟ್ ಚಿತ್ರ

ಶ್ರುತಿ ಹಾಸನ್ ರೂ.150 ಕೋಟಿ ಬಜೆಟ್ ಚಿತ್ರ
New Delhi , ಗುರುವಾರ, 16 ಫೆಬ್ರವರಿ 2017 (13:52 IST)
ಒಂದರ ಹಿಂದೊಂದು ಹಿಟ್ ಚಿತ್ರಗಳನ್ನು ನೀಡುತ್ತಿರುವ ಶ್ರುತಿ ಹಾಸನ್‌ಗೆ ಇತ್ತೀಚೆಗೆ ಭರ್ಜರಿ ಆಫರ್ ಸಿಕ್ಕಿದೆ. ಸದ್ಯಕ್ಕೆ ತೆಲುಗಿನಲ್ಲಿ ಪವನ್ ಕಲ್ಯಾಣ್ ಜತೆ ಕಾಟಮರಾಯುಡು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದಾದ ಬಳಿಕ ಅವರು ಭಾರಿ ಬಜೆಟ್ ಚಿತ್ರದಲ್ಲಿ ಬಣ್ಣಹಚ್ಚಲಿದ್ದಾರೆ.
 
ಸುಂದರ್ ಪಿ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರ ಐತಿಹಾಸಿಕ ಕಥಾಹಂದರ ಒಳಗೊಂಡಿದೆಯಂತೆ. ಸುಮಾರು ರೂ.150 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸುತ್ತಿರುವಾಗಿ ಕೋಲಿವುಡ್ ಮೂಲಗಳು ಹೇಳುತ್ತಿವೆ. ಈಗಾಗಲೆ ಶ್ರುತಿ ಹಾಸನ್ ಜತೆಗೆ ಮಾತುಕತೆ ಆಗಿದ್ದು, ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
 
ಚಿತ್ರಕ್ಕೆ ಸಂಘಮಿತ್ರ ಎಂದು ಹೆಸರಿಡಲಾಗಿದ್ದು, ಶೀಘ್ರದಲ್ಲೇ ಸೆಟ್ಟೇರಲಿದೆ. ನಾಯಕನ ಪಾತ್ರಕ್ಕೆ ಮಹೇಶ್ ಬಾಬು, ವಿಜಯ್ ಅವರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ ಅವರಿಬ್ಬರೂ ಹೆಚ್ಚು ಆಸಕ್ತಿ ತೋರದ ಕಾರಣ, ಆ ಸ್ಥಾನಕ್ಕೆ ಜಯಂ ರವಿ, ಆರ್ಯರನ್ನು ಕರೆತರಲು ನಿರ್ದೇಶಕರು ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಿಪರದೆಗೆ ಅಬ್ದುಲ್ ಕಲಾಂ ಜೀವನಕಥೆ