Select Your Language

Notifications

webdunia
webdunia
webdunia
webdunia

ಬೆಳ್ಳಿಪರದೆಗೆ ಅಬ್ದುಲ್ ಕಲಾಂ ಜೀವನಕಥೆ

ಬೆಳ್ಳಿಪರದೆಗೆ ಅಬ್ದುಲ್ ಕಲಾಂ ಜೀವನಕಥೆ
Mumbai , ಗುರುವಾರ, 16 ಫೆಬ್ರವರಿ 2017 (13:46 IST)
ವಿಜ್ಞಾನಿ, ರಾಷ್ಟ್ರಪತಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿರುವ ಎಪಿಜೆ ಅಬ್ದುಲ್ ಕಲಾಂ ಜೀವನ ಕಥೆಯಾಧಾರಿತ ಡಾಕ್ಟರ್ ಅಬ್ದುಲ್ ಕಲಾಂ ಎಂಬ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ.
 
ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಈ ವಿಷಯವನ್ನು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದಿದ್ದಾರೆ. ವಿಶೇಷ ಎಂದರೆ ಈ ಪೋಸ್ಟರ್‌ನಲ್ಲಿ ಆಗಸಕ್ಕೆ ನೆಗೆದ ಪಿಎಸ್ಎಲ್‍ವಿ ಸಿ37 ರಾಕೆಟ್ ದಾಖಲೆ ಮಾಡಿರುವ ಬಗ್ಗೆ ಇಸ್ರೋಗೆ ಅಭಿನಂದನೆಗಳನ್ನು ತಿಳಿಸಲಾಗಿದೆ. 
 
ಅನಿಲ್ ಸುಂಕರ, ಅಭಿಷೇಕ್ ಅಗರ್ವಾಲ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದ ನಟಿನಟರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಚಿತ್ರತಂಡ ತಿಳಿಸಿದೆ. ಅಬ್ದುಲ್ ಕಲಾಂ ಪಾತ್ರ ಯಾರು ಪೋಷಿಸಲಿದ್ದಾರೆ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾವಿ ಪತಿ ನಾಗಚೈತನ್ಯಗೆ ಉಮ್ಮಾ ಕೊಟ್ಟ ಸಮಂತಾ