Select Your Language

Notifications

webdunia
webdunia
webdunia
webdunia

ಮಹಿಳಾ ಆಟೋ ಡ್ರೈವರ್ ಗೆ ಭರ್ಜರಿ ಉಡುಗೊರೆ ನೀಡಿದ ನಟಿ ಸಮಂತಾ

ಮಹಿಳಾ ಆಟೋ ಡ್ರೈವರ್ ಗೆ ಭರ್ಜರಿ ಉಡುಗೊರೆ ನೀಡಿದ ನಟಿ ಸಮಂತಾ
ಹೈದರಾಬಾದ್ , ಮಂಗಳವಾರ, 20 ಏಪ್ರಿಲ್ 2021 (12:10 IST)
ಹೈದರಾಬಾದ್ : ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುರಲ್ಲಿ ನಟಿ ಸಮಂತಾ ಯಾವಾಗಲೂ ಮುಂದಾಗಿರುತ್ತಾರೆ. ಹಾಗಾಗಿ ಇದೀಗ ಅವರು ಮಹಿಳಾ ಆಟೋ ಡ್ರೈವರ್ ಒಬ್ಬಳಿಗೆ ಭರ್ಜರಿ ಉಡುಗೊರೆಯಾಗಿ ನೀಡಿದ್ದಾರೆ.

ನಟಿ ಸಮಂತಾ 2012ರಲ್ಲಿ ತಮ್ಮದೇ ಆದ ಎನ್ ಜಿಓ ಅನ್ನು ಪ್ರಾರಂಭಿಸಿದ್ದಾರೆ. ಆ ಮೂಲಕ ಬಡ ಮಹಿಳೆಯರು ಮತ್ತು ದೀನದಲಿತ ಮಕ್ಕಳಿಗೆ ವೈದ್ಯಕೀಯ ನೆರವು ನೀಡಿದ್ದಾರೆ. ಇದೀಗ ಅವರು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಮಹಿಳಾ ಆಟೋ ಡ್ರೈವರ್ ಒಬ್ಬಳಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಆ ಮಹಿಳೆಯನ್ನು ಸಮಂತಾ ಟಾಕ್ ಸೋ ನಲ್ಲಿ ಭೇಟಿ ಮಾಡಿದ್ದು, ಆಕೆ ಆಟೋ ಓಡಿಸಿ ಆ ಮೂಲಕ ತನ್ನ 7 ಸಹೋದರಿಯರನ್ನು ನೋಡಿಕೊಳ್ಳುತ್ತಿದ್ದಾಳೆ ಎಂಬುದನ್ನು ತಿಳಿದುಕೊಂಡರು. ಹಾಗೇ ಅವಳಿಗೆ ಕ್ಯಾಬ್ ಸೇವೆ ನಡೆಸಲು ಕಾರನ್ನು ನೀಡುವುದಾಗಿ  ಅಂದು ಭರವಸೆ ನೀಡಿದ್ದರು. ಅದರಂತೆ ಸಮಂತಾ ಇದೀಗ ಆ ಮಹಿಳೆಗೆ 12.5ಲಕ್ಷರೂ. ಮೌಲ್ಯದ ಕಾರನ್ನು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಟಾಲಿವುಡ್ –ಕಾಲಿವುಡ್ ನಟರಿಬ್ಬರು ಜೊತೆ ಸೇರಿ ಮಾಡಲಿದ್ದಾರಂತೆ ಮಲ್ಟಿಸ್ಟಾರ್ ಚಿತ್ರ