ಅಕ್ರಮ ಚಿನ್ನ ಸಾಗಿಸುತ್ತಿರುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ

Sampriya
ಬುಧವಾರ, 16 ಜುಲೈ 2025 (19:56 IST)
ಬೆಂಗಳೂರು: ಅಕ್ರಮವಾಗಿ ಕೋಟ್ಯಂತರ ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದ ವೇಳೆ ವಿಮಾನದಲ್ಲಿ ಸಿಕ್ಕಿಬಿದ್ದ ಕನ್ನಡ ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿಯಾಗಿದೆ. 

ರನ್ಯಾರಾವ್ ವಿರುದ್ಧ ಕಾಫಿಪೋಸಾ ಕಾಯ್ದೆಯನ್ನು  ಜಾರಿ ಮಾಡಲಾಗಿದೆ. ಹೀಗಾಗಿ ರನ್ಯಾರಾವ್ 1 ವರ್ಷ ಕಾಲ ಜೈಲಿನಲ್ಲೇ ಇರಬೇಕಾದ ಅನಿವಾರ್ಯ ಎದುರಾಗಿದೆ. ಒಂದು ವೇಳೆ ಜಾಮೀನು ನೀಡಿದ್ರೆ ವಿದೇಶಕ್ಕೆ ಹಾರುವ ಸಾಧ್ಯತೆಗಳಿದೆ, ಜೊತೆಗೆ ಸಾಕ್ಷ್ಯಗಳ ಮೇಲೂ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ರನ್ಯಾ ವಿರುದ್ಧ ಕಾಫಿಪೋಸಾ ಜಾರಿ ಮಾಡಿ ಕಾಫಿಪೋಸಾ ಅಡ್ವೈಸರಿ ಬೋರ್ಡ್ ಆದೇಶ ಹೊರಡಿಸಿದೆ. 

ಕಾಫಿಪೋಸಾ ಅನ್ವಯ ರನ್ಯಾ ರಾವ್‌ ಹಾಗೂ ಇತರ ಆರೋಪಿಗಳು ಒಂದು ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ. ಈ ಕುರಿತು ಕಾಫಿ ಪೋಸಾ ಅಡ್ವೈಸರಿ ಬೋರ್ಡ್ DRIಗೆ ಮಾಹಿತಿ ನೀಡಿದ್ದು, DRI ನಿಂದ ಜೈಲು ಅಧೀಕ್ಷಕರಿಗೆ ಮಾಹಿತಿ ರವಾನೆ ಮಾಡಲಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತೆರೆದ ದೊಡ್ಮನೆ, ನನ್ನ ಕರೆಗೆ ತಕ್ಷಣವೇ ಸ್ಪಂದಿಸಿದ ಡಿಕೆ ಶಿವಕುಮಾರ್ ಧನ್ಯವಾದ: ಕಿಚ್ಚ ಸುದೀಪ್ ಪೋಸ್ಟ್

ತನ್ನ ಮೈಮಾಟದ ಹಿಂದಿನ ರಹಸ್ಯ ಬಿಚ್ಚಿಟ್ಟ ತಮನ್ನಾ ಭಾಟಿಯಾ

ಗಂಡ ರೋಷನ್ ಅಡುಗೆ ಕೈ ರುಚಿಗೆ ಮನಸೋತ ಅನುಶ್ರೀ

ಕಾಂತಾರ ಚಾಪ್ಟರ್ 1 ವಿರುದ್ಧ ದೈವಕ್ಕೇ ದೂರು

ಕಾಂತಾರ ಚಾಪ್ಟರ್ 1 ಒಂದು ವಾರದಲ್ಲಿ ಗಳಿಸಿದ್ದು ಎಷ್ಟು

ಮುಂದಿನ ಸುದ್ದಿ
Show comments